ಧಾರವಾಡ: ಲಾಕ್ಡೌನ್ ಹಿನ್ನೆಲೆ ನಿರ್ಗತಿಕರಿಗೆ, ಬಡವರಿಗೆ ದಿನಸಿ ವಸ್ತುಗಳು ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಧಾರವಾಡದಲ್ಲಿ ಕೆಲ ಸಂಘ ಸಂಸ್ಥೆಗಳು ಅವರಿಗೆ ದಿನಸಿ ವಸ್ತುಗಳನ್ನು ಪೂರೈಸಲು ಮಾಡಲು ಮುಂದಾಗಿವೆ.
ಈರುಳ್ಳಿ, ಆಲೂಗಡ್ಡೆ, ಹಿಟ್ಟು, ಅಕ್ಕಿ, ಎಣ್ಣೆ ಪೂರೈಕೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ನೀಡಿರುವ 20 ಲಕ್ಷ ಅನುದಾನದಲ್ಲಿ ಧಾರವಾಡದ ಸಾಫಲ್ಯ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಸೊಸೈಟಿ ದಿನಸಿ ವಸ್ತುಗಳನ್ನು ಖರೀದಿಸಿ ಅವುಗಳನ್ನು ಪ್ಯಾಕ್ ಮಾಡಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ.