ಧಾರವಾಡ: ಕೆಲಗೇರಿ ಬಡಾವಣೆ ನಿವಾಸಿ ರಮೇಶ ಬನ್ನಪ್ಪನವರ ಧಾರವಾಡ ನಗರದ ಆರ್ಎಲ್ಎಸ್ ಶಾಲೆಯ ವಿದ್ಯಾರ್ಥಿ. ಇತ್ತೀಚೆಗೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆದಿದ್ದ. ಆದರೆ ಕನ್ನಡದಲ್ಲಿ ಆತನಿಗೆ ಬರಬೇಕಾದ ಅಂಕದ ಬದಲಿಗೆ ಕೇವಲ 10 ಅಂಕ ಬಂದಿತ್ತು.
ಆದರೆ ರಮೇಶನಿಗೆ ಕನ್ನಡದಲ್ಲಿ 80 ರಿಂದ 85 ಅಂಕದ ನಿರೀಕ್ಷೆ ಇತ್ತು. ಈ ಫಲಿತಾಂಶದಿಂದ ಮನೆಯವರು ಮತ್ತು ರಮೇಶ ತುಂಬಾ ಬೇಸಗೊಂಡಿದ್ದರು. ಶಾಲೆಗೆ ಹೋಗಿ ವಿಚಾರಿಸಿದಾಗ ಮರು ಮೌಲ್ಯಮಾಪನಕ್ಕೆ ಮತ್ತು ಉತ್ತರ ಪತ್ರಿಕೆ ಪತ್ರಿ ಪಡೆಯಲು ಅರ್ಜಿ ಹಾಕುವಂತೆ ಹೇಳುತ್ತಾರೆ. ಆದರಂತೆ ಉತ್ತರ ಪತ್ರಿಕೆಯ ಪ್ರತಿ ನೋಡಿದಾಗ ಅದರಲ್ಲಿ 82 ಅಂಕ ಕೊಡಲಾಗಿತ್ತು.
ಆದರೆ ಫಲಿತಾಂಶ ಪಟ್ಟಿಯಲ್ಲಿ ತಪ್ಪು ನಮೂದಾಗಿತ್ತು. ರಮೇಶನ ಫಲಿತಾಂಶದಲ್ಲಿ ಫೇಲ್ ಎಂದು ಇದ್ದ ಕಾರಣ ಪಿಯುಸಿಗೆ ಸೇರಲಾಗದೇ ಸಮಸ್ಯೆಯಾಗಿದೆ. ಅದಲ್ಲದೇ ಪಿಯುಸಿ ಪ್ರವೇಶವೂ ಮುಗಿದಿರುವುದರಿಂದ ತೊಂದರೆ ಆಗಿದೆ ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ.
ಇದನ್ನೂ ಓದಿ: ರಾಜ್ಯದಲ್ಲಿಂದು 197 ಮಂದಿಯಲ್ಲಿ ಕೋವಿಡ್ ಸೋಂಕು ದೃಢ: ಓರ್ವ ಸಾವು