ETV Bharat / city

ಸೌರಶಕ್ತಿ ಸದ್ಭಳಕೆ ಮಾಡಿದ ನೈಋತ್ಯ ರೈಲ್ವೆ: 1.96 ಕೋಟಿ ರೂ. ಬಿಲ್ ಉಳಿತಾಯ - Southwest Railway current bill

ನೈರುತ್ಯ ರೈಲ್ವೆ ವಿವಿಧೆಡೆ ಅಳವಡಿಸಿರುವ 4656.60 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರಫಲಕಗಳಿಂದ ಕಳೆದ ಆರ್ಥಿಕ ವರ್ಷದಲ್ಲಿ 46.11 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಇದರಿಂದಾಗಿ ರೈಲ್ವೆಗೆ ವಿದ್ಯುತ್‌ ಬಿಲ್‌ನಲ್ಲಿ 1.96 ಕೋಟಿ ರೂಪಾಯಿ ಉಳಿತಾಯವಾಗಿದೆ.

Southwest Railway saves current bill by using Solar Power
ಸೌರಶಕ್ತಿ ಸದ್ಭಳಿಕೆ ಮಾಡಿದ ನೈಋತ್ಯ ರೈಲ್ವೆ
author img

By

Published : May 12, 2022, 2:52 PM IST

ಹುಬ್ಬಳ್ಳಿ (ಧಾರವಾಡ): ನೈರುತ್ಯ ರೈಲ್ವೆಯು ತನ್ನ ಸೇವಾ ಕಟ್ಟಡಗಳು, 120 ನಿಲ್ದಾಣಗಳು, ಲೆವೆಲ್‌ ಕ್ರಾಸಿಂಗ್ ಗೇಟ್‌ಗಳು ಸೇರಿದಂತೆ ವಿವಿಧೆಡೆ ಅಳವಡಿಸಿರುವ 4656.60 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರಫಲಕಗಳಿಂದ ಕಳೆದ ಆರ್ಥಿಕ ವರ್ಷದಲ್ಲಿ 46.11 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಇದರಿಂದಾಗಿ ರೈಲ್ವೆಗೆ ವಿದ್ಯುತ್‌ ಬಿಲ್‌ನಲ್ಲಿ 1.96 ಕೋಟಿ ರೂಪಾಯಿ ಉಳಿತಾಯವಾಗಿದೆ.

ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್‌ ಅಗತ್ಯತೆಯ ಶೇ. 70ರಷ್ಟು ಸೌರಶಕ್ತಿಯಿಂದಲೇ ಪೂರೈಕೆಯಾಗಿದೆ. ಕಾರ್ಯಗಾರದ ಶೇ. 83ರಷ್ಟು ವಿದ್ಯುತ್ (ಅಗತ್ಯವಿರುವ ಒಟ್ಟು ವಿದ್ಯುತ್‌ 13.51 ಲಕ್ಷ ಯುನಿಟ್‌) ಹಾಗೂ ಇಎಂಡಿ ಶೆಡ್‌ನ ವಾರ್ಷಿಕ 1.13 ಲಕ್ಷ ಯುನಿಟ್‌ಗಳ ವಿದ್ಯುತ್‌ ಬಳಕೆಯ ಪೈಕಿ ಶೇ. 60ರಷ್ಟು ವಿದ್ಯುತ್ ಅನ್ನು ಸೌರಶಕ್ತಿಯಿಂದ ಪಡೆದುಕೊಳ್ಳಲಾಗಿದೆ ಎಂದು ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಸೌರಶಕ್ತಿ ಸದ್ಭಳಿಕೆ ಮಾಡಿದ ನೈಋತ್ಯ ರೈಲ್ವೆ

ರೈಲ್‌ ಸೌಧದಲ್ಲಿ ಅಳವಡಿಸಲಾಗಿರುವ ಸೌರಫಲಕಗಳಿಂದ 2.75 ಲಕ್ಷ ಯುನಿಟ್‌ ವಿದ್ಯುತ್‌, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 84,294 ಯುನಿಟ್‌, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 94,115 ಯುನಿಟ್‌ ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಿರುವ ಸೌರಫಲಕಗಳಿಂದ 1.28 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ.

ಇದನ್ನೂ ಓದಿ: ಒಬಿಸಿ ಮೀಸಲಾತಿಯೊಂದಿಗೆ ಸ್ಥಳೀಯ ಸಂಸ್ಥೆ ಚುನಾವಣೆ: ಸಿಎಂ ಬೊಮ್ಮಾಯಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗುವುದು. ನೈರುತ್ಯ ರೈಲ್ವೆಯು ಪರಿಸರ ಸ್ನೇಹಿ ಸೌರಶಕ್ತಿ ಬಳಸಿಕೊಳ್ಳುತ್ತಿದ್ದು, 2030ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆಯಾಗಿ ಹೊರಹೊಮ್ಮುವ ಗುರಿ ಹೊಂದಿದೆ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.