ETV Bharat / city

ಖಾಸಗಿ ಕಾಲೇಜು ಅಧ್ಯಕ್ಷನ ಮೇಲೆ ಲೈಂಗಿಕ ಕಿರುಕುಳ ಆರೋಪ: ಆರೋಪಿಗಳ ವಿರುದ್ಧ ಪ್ರಕರಣ ದಾಖಲು - ಧಾರವಾಡದ ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್

ಧಾರವಾಡ ಜಿಲ್ಲೆಯ ಖಾಸಗಿ ಕಾಲೇಜು ಅಧ್ಯಕ್ಷನ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

case on Private College chairman  Sexual Harassment case  Dharwad crime news  ಖಾಸಗಿ ಕಾಲೇಜ್ ಅಧ್ಯಕ್ಷನ ಮೇಲೆ ಲೈಂಗಿಕ ಕಿರುಕುಳ ಆರೋಪ  ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ದಾಖಲು  ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ  ಕಾಲೇಜ್ ಪ್ರಿನ್ಸಿಪಾಲ್ ಮಹಾದೇವ ಕುರವತ್ತಿಗೌಡರ ವಶ  ಪ್ರಿನ್ಸಿಪಾಲ್​ ಮತ್ತು ಕಾಲೇಜ್​ ಅಧ್ಯಕ್ಷರ ಮೇಲೆ ದೂರು  ಧಾರವಾಡ ಅಪರಾಧ ಪ್ರಕರಣಗಳ ಸುದ್ದಿ
ಖಾಸಗಿ ಕಾಲೇಜ್ ಅಧ್ಯಕ್ಷನ ಮೇಲೆ ಲೈಂಗಿಕ ಕಿರುಕುಳ
author img

By

Published : Aug 18, 2022, 1:07 PM IST

Updated : Aug 18, 2022, 5:08 PM IST

ಧಾರವಾಡ: ಜಿಲ್ಲೆಯ ಖಾಸಗಿ ಕಾಲೇಜು​ ಅಧ್ಯಕ್ಷ ಮತ್ತು ಪ್ರಿನ್ಸಿಪಾಲ್ ಇಬ್ಬರು​ ವಿದ್ಯಾರ್ಥಿನಿ ಪುಸಲಾಯಿಸಿ ಅತ್ಯಾಚಾರ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನೆಲೆ ಧಾರವಾಡದ ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಾಲೇಜು ಪ್ರಿನ್ಸಿಪಾಲ್ ಮಹಾದೇವ ಕುರವತ್ತಿಗೌಡರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣದ ಕುರಿತು ತೀವ್ರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಕುರುವತ್ತಿಗೌಡರ್​ ಎರಡನೇ ಆರೋಪಿಯಾಗಿದ್ದಾರೆ. ಒಂದನೇ ಆರೋಪಿಯಾಗಿರುವ ಬಸವರಾಜ ಯಡವಣ್ಣವರ ಎಸ್ಕೇಪ್ ಆಗಿದ್ದು, ಸದ್ಯ ನೊಂದ ವಿದ್ಯಾರ್ಥಿಯರನ್ನು ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.

ಪ್ರಿನ್ಸಿಪಾಲ್​ ಮತ್ತು ಕಾಲೇಜು ಅಧ್ಯಕ್ಷರ ವಿರುದ್ಧ ದೂರು: ಕಾಲೇಜು ವಿದ್ಯಾರ್ಥಿನಿಯರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೇವಸ್ಥಾನಕ್ಕೆ ಹಾಗೂ ಆಸ್ಪತ್ರೆಗೆ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಗೆ ಕರೆದುಕೊಂಡು ಹೋಗುವ ನೆಪದಲ್ಲಿ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸುಮಾರು 10 ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಸುಮಾರು ನಾಲ್ಕು ವರ್ಷಗಳಿಂದ ಈ ಇಬ್ಬರು ವಿದ್ಯಾರ್ಥಿಗಳ ಮೇಲೆ ನಿರಂತರ ಲೈಂಗಿಕ ಕಿರುಕುಳ ನಡೆದಿದೆ ಎನ್ನಲಾಗಿದೆ. ವಿದ್ಯಾರ್ಥಿನಿಯರು ಇರುವ ಹಾಸ್ಟೇಲ್​ಗೆ ತೆರಳಿ ರಾತ್ರಿ 12 ಗಂಟೆವರೆಗೆ ಕಾಲ ಕಳೆಯುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ.

ಕಾಲೇಜು ಅಧ್ಯಕ್ಷ ಬಸವರಾಜ್ ಯಡವಣ್ಣವರ ಹಾಗೂ ಪ್ರಿನ್ಸಿಪಾಲ್ ಮಹಾದೇವ ಕುರವತ್ತಾಗೌಡ ಮೇಲೆ ಪೋಕ್ಸೋ ಕಾಯ್ದೆಯಡಿ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪರಾರಿಯಾಗಿರುವ ಪ್ರಮುಖ ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.

ಓದಿ: ಸೊಸೆ, ಮಗ, ತಂದೆಯಿಂದ ನಡೀತಿತ್ತು ಹೈಟೆಕ್​ ವೇಶ್ಯಾವಾಟಿಕೆ.. ದಂಧೆಗೆ ಬರುತ್ತಿದ್ದರು ಮಹಾರಾಷ್ಟ್ರ ಕಾಲ್​ ಗರ್ಲ್ಸ್​

Last Updated : Aug 18, 2022, 5:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.