ಹುಬ್ಬಳ್ಳಿ : ನಗರದ ದೇಶಪಾಂಡೆ ಫೌಂಡೇಶನ್ ಲೀಡರ್ಸ್ ಎಕ್ಸಲ್ರೇಟಿಂಗ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಡಿ ಸೇವ್ ವಾಟರ್ ಚಾಲೆಂಜ್-2020 ಪ್ರಾರಂಭಿಸಲಾಗಿದೆ. ನೀರಿನ ಮೂಲಗಳ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.
ಈ ಅಭಿಯಾನದಲ್ಲಿ ಮನೆ ಮನೆಗೂ ಮಳೆ ನೀರು ಕೊಯ್ಲು, ಇಂಗು ಗುಂಡಿ, ಕೊಳವೆ ಬಾವಿಗಳ ಪುನಶ್ಚೇತನದ ಕುರಿತು ಜಾಗೃತಿ ನೀಡುವ ಮೂಲಕ ಸರ್ಕಾರಿ ಶಾಲೆ, ಸಾಮುದಾಯಿಕ ಪ್ರದೇಶಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಜನರ ಸಹಭಾಗಿತ್ವದಲ್ಲಿ ನೀರಿನ ಸಂರಕ್ಷಣೆಯ ಯೋಜನೆ ರೂಪಿಸಿದೆ.
ಈಗಾಗಲೇ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಮಳೆ ನೀರು ಕೊಯ್ಲಿನ ಕುರಿತ ಚಿತ್ರಕಲೆ ಮತ್ತು ಇಂಗು ಗುಂಡಿ ನಿರ್ಮಾಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದಾರೆ.
ಇಂಗು ಗುಂಡಿ ನಿರ್ಮಾಣದ ಮಾಹಿತಿ ಪಡೆದುಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಆಸಕ್ತರಿರುವ ಯುವಕ-ಯುವತಿಯರು ಹೆಚ್ಚಿನ ಮಾಹಿತಿಗೆ ಗುರು ಸಿದ್ದಯ್ಯ ಕೊಣ್ಣುರಮಠ (ಮೊಬೈಲ್ ಸಂಖ್ಯೆ-9900035214) ಅವರನ್ನು ಸಂಪರ್ಕಿಸಬಹುದು.