ಹುಬ್ಬಳ್ಳಿ: ರಾಜ್ಯ ಸರ್ಕಾರ ಮೊನ್ನೆಯಿಂದ ಮತ್ತೆ ಅನ್ಲಾಕ್ ಮಾಡಿದೆ. ರಸ್ತೆಗಿಳಿಯದೆ ಸ್ತಬ್ಧವಾಗಿದ್ದ ಸಾರಿಗೆ ಇಲಾಖೆಯ ಬಸ್ಸುಗಳು ಇಂದಿನಿಂದ ಮತ್ತೆ ರಸ್ತೆಗಿಳಿದಿವೆ.

ಬಸ್ ಸಂಚಾರ ಆರಂಭವಾದ್ರು, ಸಾರಿಗೆ ನಿಗಮಗಳು ಮಾತ್ರ ಆರ್ಥಿಕ ನಷ್ಟ ಎದುರಿಸುತ್ತಿದ್ದು, ಜೂನ್ ತಿಂಗಳ ವೇತನಕ್ಕೆ ಆಗ್ರಹಿಸಿ, ಸಾರಿಗೆ ನೌಕರರನ್ನ ಉಳಿಸಿ ಎಂದು ಟ್ವಿಟ್ಟರ್ನಲ್ಲಿ ಚಳವಳಿ ಆರಂಭವಾಗಿದೆ.

ಮುಖ್ಯಮಂತ್ರಿ ಬಿಎಎಸ್ವೈಗೆ ಟ್ವೀಟ್ ಮಾಡಿ ಆರಂಭವಾಗಿರುವ ಚಳವಳಿಗೆ ನಾಡಿನಾದ್ಯಂತ ಬೆಂಬಲ ವ್ಯಕ್ತವಾಗಿದೆ.

ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು ಹಾಗೂ ಹಿರಿಯ ಸಾಹಿತಿ ರಂಜಾನ್ ದರ್ಗಾ ಸೇರಿದಂತೆ ಹಲವರು ಚಳವಳಿಗೆ ಬೆಂಬಲ ಸೂಚಿಸಿದ್ದಾರೆ.


ಸಾರಿಗೆ ನೌಕರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತಕ್ಷಣ ವೇತನ ನೀಡುವಂತೆ ಒತ್ತಾಯಿಸಿದ್ದಾರೆ.