ETV Bharat / city

ರಷ್ಯಾ ಉಕ್ರೇನ್​ ಕದನದ ನಡುವೆ ಏರ್​ಲಿಫ್ಟ್​ ಸುಲಭದ ಮಾತಲ್ಲ: ಕೇಂದ್ರ ಸಚಿವ ಜೋಶಿ

ಯುದ್ಧಪೀಡಿತ ಉಕ್ರೇನ್​ನಿಂದ ಭಾರತೀಯರನ್ನು ಏರ್​ ಲಿಫ್ಟ್​ ಮಾಡುವ ಕಾರ್ಯಾಚರಣೆ ಅಷ್ಟು ಸುಲಭದ ಮಾತಲ್ಲ. ಅಲ್ಲಿರುವ ಎಲ್ಲಾ ಭಾರತೀಯರನ್ನು ಕರೆತರಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

central minisrte orahalad joshi
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
author img

By

Published : Mar 5, 2022, 4:41 PM IST

ಧಾರವಾಡ: ರಷ್ಯಾ-ಉಕ್ರೇನ್ ಕದನ ವಿರಾಮ ವಿಚಾರ ಜಗತ್ತಿನಲ್ಲಿಯೇ ಅತ್ಯಂತ ಪರಿಶ್ರಮದ ಏರಲಿಫ್ಟ್ ಕಾರ್ಯಾಚರಣೆ ನಮ್ಮದು. ಪ್ರಧಾನಿ ಮಾರ್ಗದರ್ಶನದಲ್ಲಿ ಏರಲಿಫ್ಟ್ ನಡೆಸಲಾಗ್ತಿದೆ ಎಂದು‌ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕದನ ವಿರಾಮ ಇದಕ್ಕೆ ಇನ್ನೂ ಉಪಯೋಗ ಆಗಲಿದೆ. ಈಗಾಗಲೇ ಸುಮಾರು 15 ಸಾವಿರ ಜನ ಸ್ವದೇಶಕ್ಕೆ ಬಂದಿದ್ದಾರೆ. ಉಳಿದವರನ್ನೂ ಕರೆ ತರಲಾಗುವುದು, ಕೊನೆಯ ವ್ಯಕ್ತಿಯನ್ನೂ ಸುರಕ್ಷಿತವಾಗಿ ತರೋದೇ ನಮ್ಮ ಜವಾಬ್ದಾರಿ. ಅದನ್ನು ನಮ್ಮ ಕರ್ತವ್ಯ ಅಂತಾನೇ ಮಾಡುತ್ತಿದ್ದೇವೆ ಎಂದು ಹೇಳಿದರು.

ಏರಲಿಫ್ಟ್ ವ್ಯವಸ್ಥೆ ಬಗ್ಗೆ ಕೆಲ ವಿದ್ಯಾರ್ಥಿಗಳ ಅಪಸ್ವರ ವಿಚಾರಕ್ಕೆ ಮಾತನಾಡಿದ ಸಚಿವರು, ಅಲ್ಲಿ ತೊಂದರೆ, ನೋವು ಆಗಿರಬಹುದು. ಯುದ್ಧದಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಬಿಂಗ್ ನಡೆದಿದೆ. ಹೀಗಾಗಿ ಅವರನ್ನು ತಲುಪಲು ತೊಂದರೆ ಆಗಿರಬಹುದು. ನಾವು ಯಾರಿಗೂ ತೊಂದರೆಯಾಗಿಲ್ಲ ಅಂತಾ ಹೇಳುತ್ತಿಲ್ಲ. ಆದರೆ ಪರಿಸ್ಥಿತಿಯೂ ಅಷ್ಟೊಂದು ಭೀಕರವಾಗಿದೆ. ಅವರು ಅನುಭವಿಸಿದ ಕಷ್ಟದಿಂದ ಹಾಗೆ ಮಾತನಾಡುತ್ತಾರೆ. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಿಲ್ಲ ಎಂದರು.

ಬಿಜೆಪಿ ಸರ್ಕಾರ ಹಣ ಮಾಡುತ್ತಿದೆ ಎಂಬ ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಹಾಲಪ್ಪ ಆಚಾರ, ಮೋದಿ ಅವರನ್ನು ಎರಡು ಬಾರಿ ಜನ ಆಯ್ಕೆ ಮಾಡಿದ್ದು ಏಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್​ನವರು ಕೇವಲ ಹಣ ಮಾಡಿದ್ದಾರೆ ಎಂದೇ ಅವರಿಗೆ ಅಧಿಕಾರ ಕೊಡುತ್ತಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ: ಶಿಕಾರಿಪುರಕ್ಕೆ ನೀರಾವರಿ ಆಗಿರುವುದು ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ: ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.