ETV Bharat / city

ಕಿಮ್ಸ್​ಗೆ ವೈದ್ಯಕೀಯ ಸೇವೆಗೆ ಕೈ ಜೋಡಿಸಿದ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ: ಬಡವರಿಗೆ ಸಿಗಲಿದೆ ಹೆಚ್ಚಿನ ಸೇವೆ - ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ

ಹುಬ್ಬಳ್ಳಿಯ "ದಿ ರೋಟರಿ ಫೌಂಡೇಷನ್"ನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿಯಿಂದ ಕಿಮ್ಸ್​ಗೆ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮತ್ತು ಡಯಾಲಿಸಿಸ್ ಮಾಡಲು ಬೇಕಿರುವ ಯಂತ್ರ ಮತ್ತು ಪರಿಕರಗಳನ್ನು ನೀಡಲು ಮುಂದಾಗಿದೆ.

rotary club
rotary club
author img

By

Published : Apr 21, 2021, 4:28 PM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಜನರಿಗೆ ಉತ್ತಮವಾದ ವೈದ್ಯಕೀಯ ಸೇವೆ ಒದಗಿಸಲು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಾಕಷ್ಟು ಸೇವೆ ಸಲ್ಲಿಸುತ್ತಿದೆ. ಆದರೆ, ಈಗ ಖಾಸಗಿ ಸಂಸ್ಥೆಯೊಂದು ಕಿಮ್ಸ್ ಸೇವೆಗೆ ಕೈ ಜೋಡಿಸುವ ಮೂಲಕ ಸಾರ್ವಜನಿಕ ಸೇವೆಗೆ ಮುಂದಾಗಿದೆ. ಇದರಿಂದ ಬಡಜನರಿಗೆ ಸಾಕಷ್ಟು ಅನುಕೂಲವಾಗುವುದಂತೂ ಖಂಡಿತ.

ಹುಬ್ಬಳ್ಳಿಯ "ದಿ ರೋಟರಿ ಫೌಂಡೇಶನ್"ನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ಕಿಮ್ಸ್​ಗೆ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮತ್ತು ಡಯಾಲಿಸಿಸ್ ಮಾಡಲು ಬೇಕಿರುವ ಯಂತ್ರ ಮತ್ತು ಪರಿಕರಗಳನ್ನು ನೀಡಲು ಮುಂದಾಗಿದೆ. ಸುಮಾರು 40 ಲಕ್ಷ ಮೌಲ್ಯದ ಉಪಕರಣಗಳನ್ನು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿತರಿಸಲು ಸಿದ್ಧತೆ ಮಾಡಿಕೊಂಡಿದೆ. ಇನ್ನೂ ರೋಗಿಗಳಿಗೆ ಡಯಾಲಿಸಿಸ್ ಹಾಗೂ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮಾಡಿಸಲು ಖಾಸಗಿ ಆಸ್ಪತ್ರೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಸಹಾಯದಿಂದ ಬಡವರಿಗೆ ಉಪಯುಕ್ತವಾಗಲಿದೆ.

ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯ ಮಾಡಲಾಗುತ್ತಿದ್ದು, ಈವರೆಗೆ ಕಿಮ್ಸ್​ಗೆ ಸುಮಾರು ಒಂದೂವರೆ ಕೋಟಿ ರೂ.ನ ಯಂತ್ರೋಪಕರಣಗಳನ್ನು ನೀಡಲಾಗಿದೆ. ಅದರಂತೆ ಇದೀಗ 40 ಲಕ್ಷ ರೂ. ವೆಚ್ಚದಲ್ಲಿ ಬಡ ಮತ್ತು ನಿರ್ಗತಿಕ ರೋಗಿಗಳಿಗೆ ಕಿಮ್ಸ್​ನಲ್ಲಿ ಕಿಡ್ನಿ ಟ್ರಾನ್ಸ್ ಪ್ಲಾಂಟೇಶನ್ ಮಾಡಲು ಮೂತ್ರಪಿಂಡ ಕಸಿ ಮಾಡುವಿಕೆಯ ಉಪಕರಣಗಳನ್ನು ನೀಡಲಾಗುತ್ತಿದೆ.

rotary club provides medical equipments to kims hospital
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ

ಇದರಿಂದ ಕಿಮ್ಸ್​ಗೆ ಮಾತ್ರವಲ್ಲದೇ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಕಿಮ್ಸ್ ನೆಪ್ರಾಲಜಿ ವಿಭಾಗದ ಮುಖ್ಯಸ್ಥರು. ಏಪ್ರಿಲ್ 23ರಂದು ಕಿಮ್ಸ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಹಸ್ತಾಂತರ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.