ETV Bharat / city

ಅಮರಗೋಳದಲ್ಲಿ ಬೆಳಿಗ್ಗೆ ಜೆಸಿಬಿ ಘರ್ಜನೆ: ಹೆದ್ದಾರಿ ನಿರ್ಮಾಣಕ್ಕೆ ಮನೆಗಳ ತೆರವು - houses demolition due to state highway

ಹುಬ್ಬಳ್ಳಿಯ ಅ‌ಮರಗೋಳ- ಅಮ್ಮಿನಬಾವಿ ಮಾರ್ಗವನ್ನು ರಾಜ್ಯ ಹೆದ್ದಾರಿಯನ್ನಾಗಿ ನಿರ್ಮಿಸುವ ಉದ್ದೇಶದಿಂದ ರಸ್ತೆ ಪಕ್ಕದ ಮನೆಗಳನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಗಿದೆ.

road-side-houses-demolition
ಮನೆಗಳ ತೆರವು
author img

By

Published : Jun 14, 2020, 10:42 AM IST

ಹುಬ್ಬಳ್ಳಿ: ಬೆಳ್ಳಂಬೆಳಗ್ಗೆಯೇ ನಗರದ ಅಮರಗೋಳದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ರಸ್ತೆಯ ಪಕ್ಕದ ಮನೆಗಳನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.‌

ಮನೆಗಳ ತೆರವು ಕಾರ್ಯಾಚರಣೆ
ಹೆದ್ದಾರಿ ನಿರ್ಮಾಣ ನೆಪದಲ್ಲಿ ಬಡವರನ್ನು ಸರ್ಕಾರ ಬೀದಿಪಾಲು ಮಾಡಿದೆ. ನಮಗೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಮಾಡದೆ ಅ‌ಮರಗೋಳ- ಅಮ್ಮಿನಬಾವಿ ಮಾರ್ಗ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಮನೆಗಳನ್ನು ತೆರವು ಮಾಡಿದ್ದಾರೆ. ಅಮರಗೋಳದಲ್ಲಿ ನೂರಾರು ವರ್ಷಗಳಿಂದ ಅಧಿಕೃತ ದಾಖಲೆ ಸಮೇತ ವಾಸವಿದ್ದವರ ಮನೆಗಳನ್ನು ಏಕಾಏಕಿ ತೆರವು ಮಾಡುತ್ತಿದ್ದಾರೆ. ಶಾಸಕ‌ ಅರವಿಂದ ಬೆಲ್ಲದ ಆಶ್ರಯ ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಕೊನೆಯ ವೇಳೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಜಾರಿಕೊಂಡಿದ್ದಾರೆ ಎಂದು‌ ಜನರು ಆಕ್ರೋಶ ಹೊರಹಾಕಿದ್ದಾರೆ.
ಮನೆಗಳನ್ನು ಕಳೆದುಕೊಂಡಿರುವ ನಮಗೆ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು ಅನ್ನೋದು ನಿವಾಸಿಗಳ ‌ಒತ್ತಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.