ETV Bharat / city

ಹುಬ್ಬಳ್ಳಿ: ಲೋಚನೇಶ್ವರ ಮಠದ ರಾಚೋಟೇಶ್ವರ ಸ್ವಾಮೀಜಿ ಲಿಂಗೈಕ್ಯ - ಹುಬ್ಬಳ್ಳಿ

ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಭೂದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದ, ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದ ಶ್ರೀ ಗುರು ಲೋಚನೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ.ರಾಚೋಟೇಶ್ವರ ಮಹಾಸ್ವಾಮೀಜಿ(Rachoteshwar mahaswamiji) ಲಿಂಗೈಕ್ಯರಾಗಿದ್ದಾರೆ.

Rachoteshwar mahaswamiji passed away
ಲೋಚನೇಶ್ವರ ಮಠದ ಮ.ನಿ.ಪ್ರ.ರಾಚೋಟೇಶ್ವರ ಸ್ವಾಮೀಜಿ ಲಿಂಗೈಕ್ಯ
author img

By

Published : Nov 18, 2021, 1:25 PM IST

ಹುಬ್ಬಳ್ಳಿ: ಕುಂದಗೋಳ ತಾಲೂಕು ಕಮಡೊಳ್ಳಿ ಗ್ರಾಮದ ಶ್ರೀ ಗುರು ಲೋಚನೇಶ್ವರ ವಿರಕ್ತಮಠದ 5ನೇ ಪೀಠಾಧಿಪತಿ ಮ.ನಿ.ಪ್ರ. ರಾಚೋಟೇಶ್ವರ ಮಹಾಸ್ವಾಮೀಜಿ(Rachoteshwar mahaswamiji) ಇಂದು ಲಿಂಗೈಕ್ಯರಾಗಿದ್ದಾರೆ.‌

ಲೋಚನೇಶ್ವರ ಮಠದ ಮ.ನಿ.ಪ್ರ.ರಾಚೋಟೇಶ್ವರ ಸ್ವಾಮೀಜಿ ಲಿಂಗೈಕ್ಯ

ಕಳೆದ ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಇಂದು ಮುಂಜಾನೆ 4 ಘಂಟೆಗೆ ವಿಧಿವಶರಾಗಿದ್ದಾರೆ. ಶ್ರೀಗಳಿಗೆ 103 ವರ್ಷ ವಯಸ್ಸಾಗಿತ್ತು. 2019ರಲ್ಲಿ ಲೋಚನೇಶ್ವರ ಮಠಕ್ಕೆ ರಾಚೋಟೇಶ್ವರ ಸ್ವಾಮೀಜಿಗಳ ಪೀಠಾರೋಹಣವಾಗಿತ್ತು.

ಇವರು ಲೋಚನೇಶ್ವರ ಮಠದ ಭೂಮಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಭೂದಾನ ಮಾಡಿ ಶಿಕ್ಷಣ ಪ್ರೇಮ ತೋರಿದ್ದರು. ಸ್ವಾಮೀಜಿಯ ನಿಧನದಿಂದ ಭಕ್ತರು ಶೋಕಸಾಗದಲ್ಲಿ ಮುಳುಗಿದ್ದಾರೆ. ಇಂದು ಲಿಂಗಾಯತ ಧರ್ಮದ ಪ್ರಕಾರ ಮಠದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.