ETV Bharat / city

ಇಂದಿನಿಂದ ಸರಕು ಸಾಗಣೆ ಮಾಡುವ ಲಾರಿಗಳ ಸಂಚಾರಕ್ಕೆ ಅವಕಾಶ : ಸಚಿವ ಶೆಟ್ಟರ್​​ - nationwide lockdown

ಪ್ರತಿ ಹಂತದಲ್ಲಿಯೂ ಸಾಮಾಜಿಕ ಅಂತರ, ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ. ಲಾರಿಗಳಲ್ಲಿ ಸರಕು ಸಾಗಾಣೆಗೆ ಮಾತ್ರ ಅನುಮತಿ ಇದೆ. ಅದರಲ್ಲಿ ಪ್ರಯಾಣಿಕರನ್ನು ಸೇರಿಸಿಕೊಳ್ಳಬಾರದು. ಲಾರಿಗಳ ಸೇವೆ ನೀಡುವವರಿಗೆ ಪೊಲೀಸರು ತೊಂದರೆ ನೀಡುವುದಿಲ್ಲ. ಪಾಸುಗಳನ್ನು ಕೊಡುತ್ತಾರೆ ಎಂದು ಸಚಿವರು ಹೇಳಿದರು.

corona virus phobia
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​​​ ಶೆಟ್ಟರ್
author img

By

Published : Mar 30, 2020, 11:47 PM IST

ಧಾರವಾಡ: ಕೊರೊನಾ ಸೋಂಕು ತಡೆಯಲು 21 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ದೇಶದ ಜನರಿಗೆ ಯಾವುದೇ ತೊಂದರೆ ಎದುರಾದರೂ ಅವುಗಳನ್ನು ಸಹಿಸಿಕೊಂಡು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​​​ ಶೆಟ್ಟರ್​​ ಮನವಿ ಮಾಡಿದರು.

ದೇಶಾದ್ಯಂತ ಇಂದಿನಿಂದ ಎಲ್ಲಾ ಬಗ್ಗೆಯ ಸರಕು ಸಾಗಣೆ ಮಾಡುವ ಲಾರಿಗಳ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಲಾಗಿದೆ. ಮನೆ ಮನೆಗೂ ತೆರಳಿ ಕಿರಾಣಿ ವಸ್ತು ಹಾಗೂ ಮಾಂಸ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅವಳಿನಗರದ ವರ್ತಕರು, ಲಾರಿ ಮಾಲೀಕರು, ಫೌಲ್ಟ್ರಿ ಫಾರ್ಮ್‌ಗಳ ಮಾಲೀಕರು, ಔಷಧಿ ಮತ್ತಿತರ ವ್ಯಾಪಾರಸ್ಥರ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಸೋಂಕು ತಡೆಯುವ ಜವಾಬ್ದಾರಿ ದೇಶದ ಪ್ರತಿ ನಾಗರಿಕನ ಮೇಲಿದೆ. ಮೂರನೇ ಹಂತಕ್ಕೆ ತಲುಪದಂತೆ ಸ್ವಯಂ ನಿರ್ಬಂಧಗಳನ್ನು ಹಾಕಿಕೊಳ್ಳಬೇಕು. ಸರ್ಕಾರ ಜನ ಸಾಮಾನ್ಯರ ಹಿತದೃಷ್ಟಿಯಿಂದ ಅನೇಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಹುಬ್ಬಳ್ಳಿ-ಧಾರವಾಡದ ಎಲ್ಲಾ ಲಾರಿಗಳ ಮಾಲೀಕರು ತಮ್ಮ ಸೇವೆಗಳನ್ನು ಪುನಾ ಆರಂಭಿಸಬಹುದು ಎಂದು ಸೂಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.