ETV Bharat / city

ವಿದ್ಯಾರ್ಥಿಗಳಲ್ಲಿ ಯಾವುದೇ ಭಯ, ಆತಂಕ ಇರಬಾರದು: ಸಚಿವ ಸುರೇಶ್ ಕುಮಾರ್​​​​​

author img

By

Published : Dec 23, 2019, 10:30 PM IST

ಮಕ್ಕಳು ಯಾವುದೇ ಭಯ, ಆತಂಕ ಪಡಬಾರದು. ಶಿಕ್ಷಣ ಮತ್ತು ಅಧ್ಯಯನದ ಬಗ್ಗೆ ಪ್ರೀತಿ ಹೆಚ್ಚಿಸಲು ಆತ್ಮವಿಶ್ವಾಸ ಹೆಚ್ಚಿಸಬೇಕು. ಪರೀಕ್ಷಾ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

KN_DWD_5_minister_visit_avb_KA10001
ವಿದ್ಯಾರ್ಥಿಗಳಲ್ಲಿ ಯಾವುದೇ ಭಯ,ಆತಂಕ,ಅನಾಹುತ ಆಗಬಾರದು: ಸಚಿವ ಸುರೇಶ್ ಕುಮಾರ ಹೇಳಿಕೆ

ಧಾರವಾಡ: ಮಕ್ಕಳು ಯಾವುದೇ ಭಯ, ಆತಂಕ ಪಡಬಾರದು. ಶಿಕ್ಷಣ ಮತ್ತು ಅಧ್ಯಯನದ ಬಗ್ಗೆ ಪ್ರೀತಿ ಹೆಚ್ಚಿಸಲು ಆತ್ಮವಿಶ್ವಾಸ ಹೆಚ್ಚಿಸಬೇಕು. ಪರೀಕ್ಷಾ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ವಿದ್ಯಾರ್ಥಿಗಳಲ್ಲಿ ಯಾವುದೇ ಭಯ, ಆತಂಕ ಇರಬಾರದು: ಸಚಿವ ಸುರೇಶ್ ಕುಮಾರ್​

ರಾಜ್ಯದ ಎಲ್ಲಾ ಜಿಲ್ಲೆಗಳ ಡಿಡಿಪಿಐ, ಬಿಇಒ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಶೈಕ್ಷಣಿಕ ಪ್ರಗತಿ ಚುರುಕುಗೊಳಿಸಲು ಎಲ್ಲಾ ಮಕ್ಕಳ ಪಾಲಕರಿಗೂ ಪತ್ರ ಬರೆದು ಪಾಲಕರ ಸಹಭಾಗಿತ್ವ ಪಡೆಯಬೇಕು ಎಂದರು. ಅದೇ ರೀತಿ ಉತ್ತಮ ಫಲಿತಾಂಶ ಬರಲು ಕಾಪಿ ಮಾಡಿಸುವ ಬದಲು ಸರಿಯಾದ ಕ್ರಮ ರೂಪಿಸಿ ಎಲ್ಲಾ ಕಡೆ ಉತ್ತಮ ಫಲಿತಾಂಶ ಬರಬೇಕು, ಗುಣಮಟ್ಟ ಹೆಚ್ಚಾಗಬೇಕು. ಉಳಿದ 93 ದಿನಗಳು ವ್ರತವಾಗಬೇಕು. ಅಲ್ಲದೇ ಶಿಕ್ಷಕರು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಬೇಕು ಎಂದು ಸಲಹೆ ನೀಡಿದರು.

ಧಾರವಾಡ: ಮಕ್ಕಳು ಯಾವುದೇ ಭಯ, ಆತಂಕ ಪಡಬಾರದು. ಶಿಕ್ಷಣ ಮತ್ತು ಅಧ್ಯಯನದ ಬಗ್ಗೆ ಪ್ರೀತಿ ಹೆಚ್ಚಿಸಲು ಆತ್ಮವಿಶ್ವಾಸ ಹೆಚ್ಚಿಸಬೇಕು. ಪರೀಕ್ಷಾ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ವಿದ್ಯಾರ್ಥಿಗಳಲ್ಲಿ ಯಾವುದೇ ಭಯ, ಆತಂಕ ಇರಬಾರದು: ಸಚಿವ ಸುರೇಶ್ ಕುಮಾರ್​

ರಾಜ್ಯದ ಎಲ್ಲಾ ಜಿಲ್ಲೆಗಳ ಡಿಡಿಪಿಐ, ಬಿಇಒ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಶೈಕ್ಷಣಿಕ ಪ್ರಗತಿ ಚುರುಕುಗೊಳಿಸಲು ಎಲ್ಲಾ ಮಕ್ಕಳ ಪಾಲಕರಿಗೂ ಪತ್ರ ಬರೆದು ಪಾಲಕರ ಸಹಭಾಗಿತ್ವ ಪಡೆಯಬೇಕು ಎಂದರು. ಅದೇ ರೀತಿ ಉತ್ತಮ ಫಲಿತಾಂಶ ಬರಲು ಕಾಪಿ ಮಾಡಿಸುವ ಬದಲು ಸರಿಯಾದ ಕ್ರಮ ರೂಪಿಸಿ ಎಲ್ಲಾ ಕಡೆ ಉತ್ತಮ ಫಲಿತಾಂಶ ಬರಬೇಕು, ಗುಣಮಟ್ಟ ಹೆಚ್ಚಾಗಬೇಕು. ಉಳಿದ 93 ದಿನಗಳು ವ್ರತವಾಗಬೇಕು. ಅಲ್ಲದೇ ಶಿಕ್ಷಕರು ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಬೇಕು ಎಂದು ಸಲಹೆ ನೀಡಿದರು.

Intro:ಧಾರವಾಡ: ಮಕ್ಕಳು , ಶಿಕ್ಷಕರು ಹಾಗೂ ಪಾಲಕರಲ್ಲಿ ಶಿಕ್ಷಣ ಮತ್ತು ಅಧ್ಯಯನದ ಪ್ರೀತಿ ಹೆಚ್ಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರದಲ್ಲಿ ಕನಿಷ್ಠ ಐದು ಶಾಲೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಪರೀಕ್ಷಾ ನಕಲು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ. ಶಿಕ್ಷಕರು ಮೌಲ್ಯಮಾಪನ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಬಹಿಷ್ಕಾರ ಮೌಲ್ಯಮಾಪನದ ಹಾಕಬಾರದು .ಶಿಕ್ಷಣದ ಗುಣಮಟ್ಟ ಅರಿಯಲು ವಿಷಯವಾರು ಮೌಲ್ಯಮಾಪನ ಕಾರ್ಯ ರಾಜ್ಯ ಮಟ್ಟದಲ್ಲಿ ಕೈಗೊಳ್ಳಲಾಗುವುದು
ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಕಾಲ ಮತ್ತು ಕಾರ್ಮಿಕ ಸಚಿವ ಎಸ್.ಸುರೇಶಕುಮಾರ್ ಹೇಳಿದರು.

ನಗರದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳಲ್ಲಿ ಬಾಲ್ಯ ವಿವಾಹ, ಲೈಂಗಿಕ ಕಿರುಕುಳ ತಡೆ ಮೊದಲಾದ ವಿಷಯಗಳ ಜಾಗೃತಿ ಮೂಡಿಸಲು ಮೀನಾ ತಂಡಗಳನ್ನು ಕ್ರಿಯಾ ಶೀಲಗೊಳಿಸಬೇಕು. ತಾವು ಇದುವರೆಗೆ ಸುಮಾರು 150 ಕ್ಕೂ ಹೆಚ್ಚು ಶಾಲೆಗಳಿಗೆ ಭೇಟಿ ನೀಡಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ್ದೇನೆ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಡಿಪಿಐ, ಬಿಇಓ ಹಾಗೂ ಇಲಾಖೆಯ ಇತರ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಅವರ ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಶೈಕ್ಷಣಿಕ ಪ್ರಗತಿ ಚುರುಕುಗೊಳಿಸಲು ಎಲ್ಲಾ ಮಕ್ಕಳ ಪಾಲಕರಿಗೂ ಪತ್ರ ಬರೆದು ಪಾಲಕರ ಸಹಭಾಗಿತ್ವ ಪಡೆಯಬೇಕು ಎಂದರು.

ಈಗಾಗಲೇ ಕಳೆದ ಅಕ್ಟೋಬರ್ ನಲ್ಲಿ ಕಲಬುರ್ಗಿ ವಿಭಾಗದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಜಿಪಂ ಸಿಇಓಗಳ ಸಭೆ ನಡೆಸಲಾಗಿದೆ. ಎಲ್ಲಾ ಜಿಲ್ಲೆಗಳ ಡಿಡಿಪಿಐ, ಜಿಪಂ ಸಿಇಓಗಳೊಂದಿಗೆ ವಿಡಿಯೋ ಸಂವಾದ , ಮಕ್ಕಳೊಂದಿಗೆ ನೇರಫೋನ್ ಇನ್ ಕಾರ್ಯಕ್ರಮ , ಪಾವಗಡ ತಾಲೂಕಿನ ಅಚ್ಚಮ್ಮನಹಳ್ಳಿ,ಚಾಮರಾಜನಗರ ಜಿಲ್ಲೆಯ ಗೋಪಿನಾಥಂ ನಲ್ಲಿ ಶಾಲಾವಾಸ್ತವ್ಯ ಮಾಡಿದ್ದೇನೆ. ಇದುವರೆಗೂ ಸುಮಾರು 15 ಜಿಲ್ಲೆಗಳಿಗೆ ಭೇಟಿ ನೀಡಿ ಶಿಕ್ಷಣ ಇಲಾಖೆಯ ವಾಸ್ತವ ಅಧ್ಯಯನ ಮಾಡಿದ್ದೇನೆ. ಇಂದಿನ ಸಭೆಯಲ್ಲಿ ಅಧಿಕಾರಿಗಳ ವಿಚಾರಗಳನ್ನು ಕೇಳಿದಾಗ ಜಿಲ್ಲೆಗಳ ನಡುವೆ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿರುವುದು. ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದೆ. ಬೆಳಗಾವಿ ಡಯಟ್ ಈಗಾಗಲೇ ಮಾಡಿರುವ ವಿಷಯವಾರು ಮೌಲ್ಯಮಾಪನ ಮಾಡಿ ವರದಿ ನೀಡಿರುವುದು ಮಾದರಿಯಾಗಿದೆ. ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದೆಲ್ಲೆಡೆ ಇದನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು..

ಪಿಕ್ ನಿಕ್ ಪಜಲ್, ಗುರೂಜಿ ಬಂದರು ಗುರುವಾರ, ಧನಾತ್ಮಕ ಅಂಶ, ಬೇಸಿಗೆ ಸಂಭ್ರಮ ,ವಾರದಲ್ಲಿ ಎರಡು ದಿನ ಬ್ಯಾಗು ರಹಿತ ದಿನ ಸೇರಿ ಮೊದಲಾದ 20 ಅಂಶಗಳ ಕಾರ್ಯಕ್ರಮ ಸಮರ್ಪಕ ಅನುಷ್ಠಾನ ಮಾಡುತ್ತಿದ್ದೇವೆ.ಕೇರಳ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಲ್ಲಿ ಕುಡಿಯುವ ನೀರಿನ ಪ್ರವೃತ್ತಿ ಹೆಚ್ಚಿಸಲು ವಾಟರ್ ಬೆಲ್ ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ. ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಆಯೋಜಿಸುವ ಕುರಿತು ಇನ್ನೊಂದು ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.Body:ಶಾಸಕ ಅರವಿಂದ ಬೆಲ್ಲದ ಮಾತನಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ,ನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್, ಸಿಸ್ಲೆಪ್ ನಿರ್ದೇಶಕ ಬಿ‌.ಎಸ್.ರಘುವೀರ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ಬಿ.ಗುಡಸಿ ಭಾಗವಹಿಸಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ಹಾಗೂ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಚಿವ ಸುರೇಶಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಿದರು. ಬೆಳಗಾವಿ ವಿಭಾಗದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐ,ಬಿಇಓ, ಡಯಟ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಜ.16 ರಂದು ಪರೀಕ್ಷಾ ಪೆ ಚರ್ಚಾ

ಬರುವ ಜನವರಿ 16 ರಂದು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಪರೀಕ್ಷಾ ಪೆ ಚರ್ಚಾ ಕರ್ಯಕ್ರಮ ನಡೆಸಲಿದ್ದಾರೆ.ಪ್ರತಿ ಜಿಲ್ಲೆಗಳಿಂದಲೂ ಆಯ್ದ ಮಕ್ಕಳನ್ನು ಕಾರ್ಯಕ್ರಮಕ್ಕೆ ಶಿಫಾರಸ್ಸು ಮಾಡಬೇಕು.ಆಯ್ಕೆಯಾದ ಮಕ್ಕಳು ನವದೆಹಲಿಯಲ್ಲಿ ಪ್ರಧಾನಮಂತ್ರಿಗಳೊಂದಿಗೆ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ.

ಅದೇ ದಿನ ಎಲ್ಲಾ ಶಾಲೆಗಳಲ್ಲಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ವೀಕ್ಷಿಸಲು ಏರ್ಪಡುಗಳನ್ನು ಮಾಡಬೇಕು. ಪರೀಕ್ಷಾ ಪೆ ಚರ್ಚಾ ಪುಸ್ತಕ ಎಲ್ಲಾ ಭಾಷೆಗಳಲ್ಲಿ ಲಭ್ಯವಿದೆ.ಆ ಪುಸ್ತಕ ಮಕ್ಕಳಿಗೆ ಸಿಗುವಂತಾಗಬೇಕು ಎಂದು ಸಚಿವರು ಹೇಳಿದರು.

*ಪಾಲಕರಿಂದ ಪ್ರತಿಜ್ಞೆ:*
ಮಕ್ಕಳ ಪರೀಕ್ಷಾ ಸಮೀಪಿಸುತ್ತಿರುವುದರಿಂದ ಕೇರಳದ ಅಲೆಪ್ಪಿ ಜಿಲ್ಲೆಯಲ್ಲಿ ಈಗಾಗಲೇ ಸಂಜೆಯ ಸಮಯದಲ್ಲಿ ಟಿವಿ ನೋಡದೇ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವುದಾಗಿ ಘೋಷಿಸಿ ಪಾಲಕರಿಂದ ಪ್ರತಿಜ್ಞೆ ಮಾಡಿಸಲಾಗಿದೆ.ಈ ಪ್ರತಿಜ್ಞಾ ಸ್ವೀಕಾರ ಕಾರ್ಯ ನಮ್ಮ ರಾಜ್ಯದಲ್ಲಿಯೂ ನಡೆಯಬೇಕು ಸಚಿವರು ಸೂಚನೆ ನೀಡಿದರು...Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.