ಧಾರವಾಡ: ಜಿಲ್ಲೆಯ ನವಲಗುಂದ ಕ್ಷೇತ್ರದ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಇದೀಗ ಜೆಡಿಎಸ್ ತೊರೆದು ನಾಳೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಲು ಸಿದ್ಧರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರೆ ಎಂದು ಮಾಹಿತಿ ಇತ್ತು. ಅಲ್ಲದೇ ಕೋನರೆಡ್ಡಿ ವಿಧಾನ ಪರಿಷತ್ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರದಲ್ಲಿ ಓಡಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಇದೀಗ ನಾಳೆ ಬೆಳಗಾವಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪ್ರಮುಖ ನಾಯಕರ ಸಮ್ಮುಖದಲ್ಲಿ ಕೈ ಹಿಡಿಯಲಿದ್ದಾರೆ. ಈ ಕುರಿತು ನಮ್ಮ 'ಈಟಿವಿ ಭಾರತ' ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ ನೋಡಿ.
ಕ್ಷೇತ್ರದ ಜನರಿಂದ ನಾನು ಕಾಂಗ್ರೆಸ್ ಸೇರಬೇಕೆಂಬ ಆದೇಶ ಬಂದಿದೆ. ಅವರೆಲ್ಲ ಆದೇಶ ಪಾಲಿಸಿ ನವಲಗುಂದಲ್ಲಿ ಸೇವೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸೇರುತ್ತಿರುವೆ ಎಂದು ಕೋನರೆಡ್ಡಿ ಹೇಳಿದ್ದಾರೆ.