ಧಾರವಾಡ: ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನುಗ್ಗಿಕೇರಿ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ಹಿಂದೂಯೇತರ ಅಂಗಡಿಗಳನ್ನು ತೆರವುಗೊಳಿಸಿದ್ದರು. ಈ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ಖಂಡಿಸುವ ಭರದಲ್ಲಿ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಗರಂ ಆಗಿದ್ದಾರೆ. ಮುಸ್ಲಿಂರು ನಮ್ಮ ಅಂಗಡಿಗಳಿಗೆ ಬರಬೇಡಿ ಅಂತಾ ಹಿಂದೂಗಳು ಬೋರ್ಡ್ ಹಾಕಲಿ ಎಂದು ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.
ಒಂದು ಕಾಲದಲ್ಲಿ ಜುಬ್ಬಾ, ಟೋಪಿ ಹಾಕಿದವರಿಗೆ ನಮಸ್ಕಾರ ಮಾಡುತ್ತಿದ್ದರು. ಜನ ಗೌರವ ಕೊಡುತ್ತಿದ್ದರು. ಆದರೆ ಬಜರಂಗ ದಳ, ಆರ್ಎಸ್ಎಸ್ ದೇಶದಲ್ಲಿ ಇಂಥಹ ಸ್ಥಿತಿ ತಂದಿದ್ದಾರೆ. ಕೋವಿಡ್ ಕಾಲದಲ್ಲಿ ಶವ ಸಂಸ್ಕಾರ ಮಾಡಿದ್ದೇ ಮುಸ್ಲಿಂ ಸಂಘಟನೆಗಳು. ಆಗ ಆರ್ಎಸ್ಎಸ್, ಬಜರಂಗದಳ ಎಲ್ಲಿದ್ದವು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನುಗ್ಗಿಕೇರಿ ಗಲಾಟೆ.. ಇದ್ಯಾವಾಗ್ಲೂ ಆ್ಯಕ್ಷನ್‌ಗೆ ರಿಯಾಕ್ಷನ್ ಆಕ್ಕೊಂತಾ ಹೋಗೋದು.. ಶಾಸಕ ಬೆಲ್ಲದ್
ದಾಡಿ, ಜುಬ್ಬಾ ಬಗ್ಗೆ ಅರವಿಂದ್ ಬೆಲ್ಲದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬೆಲ್ಲದ್ ತಮ್ಮ ಶೋರೂಮ್‌ನಲ್ಲಿ ಕಾರ್ ಮಾರುತ್ತಾರೆ. ದಾಡಿ, ಜುಬ್ಬಾ ಇದ್ದವರಿಗೆ ಕಾರ್ ಕೊಡೋಲ್ಲ ಅಂತಾ ಬರೆದು ಹಾಕಲಿ. ಅಂಗಡಿಗಳ ಮುಂದೆ ಮುಸ್ಲಿಂರಿಗೆ ವ್ಯಾಪಾರ ಬೇಡ ಅಂತಾ ಬರೆದು ಹಾಕಿಸಲಿ. ಹಿಂದೂ ಸಂಘಟನೆಗಳಿಗೆ ಬರೆದು ಹಾಕಿಸುವ ತಾಕತ್ ಇದೆಯಾ. ಇದು ರಂಝಾನ್ ತಿಂಗಳು. ಈಗ ಹಿಂದೂ ಅಂಗಡಿ ಮುಂದೆ ಮುಸ್ಲಿಂರು ಬರಬೇಡಿ ಅಂತಾ ಹಾಕಿ ನೋಡೋಣ. ಆಗ ಎಷ್ಟು ವ್ಯಾಪಾರ ನಡೆಯುತ್ತದೆಯೆಂದು ನೋಡೋಣ ಎಂದು ಸವಾಲೆಸೆದರು.