ETV Bharat / city

ಪರಿಷತ್ ಚುನಾವಣೆ: ಮತದಾನ ಆರಂಭ, ಧಾರವಾಡದಲ್ಲಿ ಪತ್ನಿ ಸಮೇತ ಮತಗಟ್ಟೆಗೆ ಬಂದ ಅಭ್ಯರ್ಥಿ

ವಿಧಾನ ಪರಿಷತ್‌ನ ವಾಯವ್ಯ, ದಕ್ಷಿಣ ಪದವೀಧರರ ಕ್ಷೇತ್ರ ಹಾಗೂ ವಾಯವ್ಯ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಮತದಾನ ಆರಂಭಗೊಂಡಿದೆ.

ಪರಿಷತ್ ಚುನಾವಣೆ
ಪರಿಷತ್ ಚುನಾವಣೆ
author img

By

Published : Jun 13, 2022, 9:36 AM IST

Updated : Jun 13, 2022, 10:35 AM IST

ಧಾರವಾಡ/ಬೆಳಗಾವಿ: ವಿಧಾನ ಪರಿಷತ್‌ನ ವಾಯವ್ಯ, ದಕ್ಷಿಣ ಪದವೀಧರರ ಕ್ಷೇತ್ರ ಹಾಗೂ ವಾಯವ್ಯ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಚುನಾವಣೆಯ ಮತದಾನ ಆರಂಭಗೊಂಡಿದೆ. ಬೆಳಗ್ಗೆ 8 ಗಂಟೆಯಿಂದ ಮತಗಟ್ಟೆಗೆ ಮತದಾರರು ಬಂದು ಹಕ್ಕು ಚಲಾಯಿಸುತ್ತಿದ್ದಾರೆ. ಶಾಂತಿಯುತ ಮತದಾನಕ್ಕೆ ಮತಗಟ್ಟೆ ಬಳಿ ಪೊಲೀಸ್ ಬಿಗಿ ಭದ್ರತೆ‌ ನೀಡಲಾಗಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರ: ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿಯಲ್ಲಿಯೂ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಬಿಜೆಪಿಯಿಂದ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ, ಜೆಡಿಎಸ್‌ನ ಶ್ರೀಶೈಲ ಗಡದಿನ್ನಿ ಸೇರಿದಂತೆ ಏಳು ಜನ ಅಖಾಡದಲ್ಲಿದ್ದಾರೆ.‌

ಪರಿಷತ್ ಚುನಾವಣೆ: ಮತದಾನ ಆರಂಭ

ಮಾಜಿ ಸಭಾಪತಿ ಬಸವರಾಜ ಹೊರಟ್ಟಿಗೆ ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಡಾಗಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳ 76 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 17,973 ಒಟ್ಟು ಶಿಕ್ಷಕ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಇವರಲ್ಲಿ 10,983 ಪುರುಷ ಹಾಗೂ 6,990 ಮಹಿಳಾ ಮತದಾರರಿದ್ದಾರೆ.

ಪತ್ನಿ ಸಮೇತ ಆಗಮಿಸಿದ ಗುರಿಕಾರ್: ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ್ ಪತ್ನಿ ಸಮೇತ ಮತಗಟ್ಟೆಗೆ ಆಗಮಿಸಿದರು. ಗುರಿಕಾರ್ ನಿವೃತ್ತಿಯಾದ ಹಿನ್ನೆಲೆ ಶಿಕ್ಷಕಿಯಾಗಿರುವ ಪತ್ನಿ ನಾಗರತ್ನ ಧಾರವಾಡದಲ್ಲಿ ಮತದಾನ ಮಾಡಿದರು.

ಹುಬ್ಬಳ್ಳಿ ಮತಗಟ್ಟೆಗೆ ಹೊರಟ್ಟಿ: ಹುಬ್ಬಳ್ಳಿಯ ಎನ್ ಆರ್ ದೇಸಾಯಿ ರೋಟರಿ ಸ್ಕೂಲ್ ಮತಗಟ್ಟೆಗೆ ಬಸವರಾಜ ಹೊರಟ್ಟಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ಬೆಳಗ್ಗೆ 10ರೊಳಗೆ ಮತ ಹಾಕುವಂತೆ ಮನವಿ ಮಾಡಿದ್ದೇವೆ ಎಂದರು. ಮತಗಟ್ಟೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪಗಳ ಬಗ್ಗೆ ಕಾನೂನು ಪ್ರಕಾರ ಉತ್ತರ ಕೊಡುತ್ತೇನೆ.

ಭ್ರಷ್ಟಾಚಾರದ ಸಾಕ್ಷಿ ಕೊಟ್ಟರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದೆ, ಒಬ್ಬರೂ ಬಂದಿಲ್ಲ. ಕೇವಲ ಚುನಾವಣೆ ಬಂದಾಗ ಆರೋಪ ಮಾಡ್ತಾರೆ. 42 ವರ್ಷ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಒಂದು ವಾರದಿಂದ ಕೇವಲ ಆರೋಪ ಮಾಡ್ತಾಯಿದ್ದಾರೆ. ಮತದಾನದ ಒಟ್ಟು ಮತಗಳಲ್ಲಿ ಶೇ 70 ರಷ್ಟು ಮತಗಳಿಂದ ಗೆಲ್ಲುವ ವಿಶ್ವಾಸವಿದ ಎಂದರು.

ವಾಯುವ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲೂ ಮತದಾನ ಶುರುವಾಗಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 190 ಮತಗಟ್ಟೆ ಕೇಂದ್ರವನ್ನ ತೆರೆಯಲಾಗಿದ್ದು, ಶಿಕ್ಷಕರ ಮತಕ್ಷೇತ್ರದ ಬ್ಯಾಲೆಟ್ ಪೇಪರ್ ಗುಲಾಬಿ ಬಣ್ಣ ಹೊಂದಿದ್ದರೆ, ಪದವೀಧರ ಮತಕ್ಷೇತ್ರದ ಬ್ಯಾಲೆಟ್ ಪೇಪರ್ ಬಿಳಿ ಬಣ್ಣದಿಂದ ಕೂಡಿದೆ. ಒಂದೇ ಮತಗಟ್ಟೆ ಕೇಂದ್ರದಲ್ಲಿ ಪ್ರತ್ಯೇಕವಾಗಿ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಬಸವರಾಜ ಹೊರಟ್ಟಿ ಪ್ರತಿಕ್ರಿಯೆ

1,548 ಸಿಬ್ಬಂದಿಗಳ ನಿಯೋಜನೆ: ಹಿರಿಯ ಐಎಎಸ್‌ ಅಧಿಕಾರಿಗಳಾದ ಮುನೀಶ್‌ ಮೌದ್ಗಿಲ್‌ ಅವರು ಶಿಕ್ಷಕರ ಕ್ಷೇತ್ರಕ್ಕೆ ಹಾಗೂ ಮೇಜರ್‌ ಮಣಿವಣ್ಣನ್‌ ಅವರು ಪದವೀಧರರ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ನಿಯೋಜನೆಗೊಂಡಿದ್ದಾರೆ. ಚುನಾವಣಾ ಕರ್ತವ್ಯ ನಿಭಾಯಿಸಲು 254 ಪ್ರಿಸೈಡಿಂಗ್‌ ಆಫೀಸರ್‌, 1,016 ಪೊಲೀಂಗ್‌ ಆಫೀಸರ್‌, 278 ಮೈಕ್ರೋ ವೀಕ್ಷಕರು ಸೇರಿದಂತೆ ಒಟ್ಟು 1,548 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಬೆಳಗಾವಿಯಲ್ಲಿ 95, ಬಾಗಲಕೋಟೆಯಲ್ಲಿ 48, ವಿಜಯಪುರದಲ್ಲಿ 47 ಸೇರಿ 190 ಮತಗಟ್ಟೆಗಳನ್ನು ತೆರೆಯಲಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ 25,388 ಹಾಗೂ ಪದವೀಧರ ಕ್ಷೇತ್ರದಲ್ಲಿ 99,598 ಮತದಾರರಿದ್ದಾರೆ. ಅರ್ಧದಷ್ಟು ಮತದಾರರು ಬೆಳಗಾವಿ ಜಿಲ್ಲೆಯಲ್ಲೇ ಇರುವ ಕಾರಣ ಈ ಒಂದೇ ಜಿಲ್ಲೆಯಲ್ಲಿ 95 ಮತಗಟ್ಟೆಗಳನ್ನು ತೆರೆಯಲಾಗಿದೆ.

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸುನೀಲ ಸಂಕ, ಬಿಜೆಪಿಯಿಂದ ಹಾಲಿ ಸದಸ್ಯ ಹಣಮಂತ ನಿರಾಣಿ, ಸರ್ವಜನತಾ ಪಕ್ಷದಿಂದ ಜಿ.ಸಿ.ಪಟೇಲ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಯಲ್ಲಪ್ಪ ಕಲಕುಟ್ರಿ, ಪಕ್ಷೇತರರಾಗಿ ಆದರ್ಶಕುಮಾರ ಪೂಜಾರಿ, ಘಟಿಗೆಪ್ಪ ಮಗದುಮ್ಮ, ದೀಪಿಕಾ ಎಸ್‌., ನಿಂಗಪ್ಪ ಭಜಂತ್ರಿ, ಭೀಮಸೇನ ಬಾಗಿ, ರಾಜನಗೌಡ ಪಾಟೀಲ, ಸುಭಾಷ ಕೋಟೆಕಲ್‌ ಸ್ಪರ್ಧಿಸಿದ್ದಾರೆ.

12ಜನ ಅಭ್ಯರ್ಥಿಗಳು ಶಿಕ್ಷಕರ ಕಣದಲ್ಲಿ: ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸದಸ್ಯ ಅರುಣ ಶಹಾಪುರ, ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿ, ಜೆಡಿಎಸ್‌ನಿಂದ ಚಂದ್ರಶೇಖರ ಲೋಣಿ, ಪಕ್ಷೇತರ ಅಭ್ಯರ್ಥಿಗಳಾಗಿ ಎನ್‌.ಬಿ.ಬನ್ನೂರ, ಶ್ರೀನಿವಾಸಗೌಡ ಗೌಡರ, ಅಪ್ಪಾಸಾಹೇಬ ಕುರಣೆ, ಚಂದ್ರಶೇಖರ ಗುಡಸಿ, ಬಸಪ್ಪ ಮಣಿಗಾರ, ಶ್ರೀಕಾಂತ ಪಾಟೀಲ, ಶ್ರೇಣಿಕ್‌ ಜಾಂಗಟೆ, ಸಂಗಮೇಶ ಚಿಕ್ಕನರಗುಂದ, ಜಯಪಾಲ ದೇಸಾಯಿ ಸ್ಪರ್ಧಿಸಿದ್ದಾರೆ.

Last Updated : Jun 13, 2022, 10:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.