ಹುಬ್ಬಳ್ಳಿ: ರಾಜ್ಯದಲ್ಲಿ ಮದ್ಯ ಮಾರಾಟ ಪುನಾರಂಭ ವಿಚಾರವಾಗಿ ಧಾರವಾಡ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಇದಕ್ಕೆ ವಿರುದ್ಧವಾದ ಮನವಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸ ಒದಗಿಸಿದೆ.
![mla request to open msil store in hubballi](https://etvbharatimages.akamaized.net/etvbharat/prod-images/kn-hbl-09-mla-belad-letter-av-7208089_19052020200217_1905f_1589898737_956.jpg)
ಹುಬ್ಬಳ್ಳಿ-ಧಾರವಾಢ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ರಾಜ್ಯಾದ್ಯಂತ ಮದ್ಯ ನಿಷೇಧ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಆಡಳಿತ ಪಕ್ಷದ ಶಾಸಕರೇ ಮದ್ಯ ನಿಷೇಧಕ್ಕೆ ಧ್ವನಿ ಎತ್ತಿರುವುದಕ್ಕೆ ಅರವಿಂದ ಬೆಲ್ಲದ ಪರವಾಗಿ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿತ್ತು. ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು ಅರವಿಂದ ಬೆಲ್ಲದ ಅವರನ್ನು ಸನ್ಮಾನಿಸಿ ನಿಮ್ಮ ಜೊತೆ ನಾವಿದ್ದೇವೆ. ಮದ್ಯ ನಿಷೇಧ ಹೋರಾಟಕ್ಕೆ ಕೈಜೋಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ಶಾಸಕ ಅರವಿಂದ ಬೆಲ್ಲದ್, ಮದ್ಯದ ಮಳಿಗೆ ತೆರೆಯಬೇಕು ಎಂಬ ಮನವಿ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾದ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸ ಒದಗಿಸುವಂತೆ ಮಾಡಿದೆ.
ಶಾಸಕರು ಮಾರ್ಚ್ 21ರಂದು ಕೆಲಗೇರಿ ಬಳಿ ಎಂಎಸ್ ಐಎಲ್ ಮಳಿಗೆ ತೆರಯಲು ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂಬ ವಿಷಯ ಪತ್ರದಲ್ಲಿದೆ.. ಈ ಪತ್ರ ಅಸಲಿಯೋ, ನಕಲಿಯೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸ ಒದಗಿಸಿದೆ.