ಧಾರವಾಡ: 'ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ' ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ನಗರದಲ್ಲಿ ಸಚಿವ ಸ್ಥಾನದ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಎಲ್ಲಾ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳು. ಈ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು. ಹೈಕಮಾಂಡ್ ಹೇಳಿದ ಹಾಗೆ ನಾನು ಕೇಳುತ್ತೇನೆ ಎಂದು ಹೇಳಿದರು.
ನಾನು ಯಾರಿಗೂ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ. ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿದ್ದೇನೆ. ಆದರೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಪ್ರಬುದ್ಧ ರಾಜಕಾರಣಿ ಇದ್ದಾರೆ. ಅವರು ವಿಚಾರ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ ಎಂದರು.
ಹೊಸ ಪ್ರಯೋಗ: ಮೊದಲಿನ ರೀತಿ ಸ್ವಂತ ಜಿಲ್ಲೆಗಳನ್ನು ಸ್ವಂತ ಸಚಿವರುಗಳಿಗೆ ಕೊಟ್ಟಿಲ್ಲ. ಉಸ್ತುವಾರಿ ಸಚಿವರನ್ನು ಅದಲು-ಬದಲು ಮಾಡಿದ್ದು ಹೊಸ ಪ್ರಯೋಗ. ಹೊಸ ಸಚಿವರು, ಹೊಸ ಜಿಲ್ಲೆಯ ಸಚಿವರಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮೂರನೇಯ ಪೀಠ ಆಗಬಾರದು: ಮೂರನೇಯ ಪೀಠ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಎರಡು ಪೀಠ ಆಗಬಾರದಿತ್ತು. ಈಗ ಯಾವುದೇ ಕಾರಣಕ್ಕೂ ಮೂರನೇಯ ಪೀಠ ಆಗಬಾರದು. ಹರಿಹರ ಸ್ವಾಮೀಜಿ ಮತ್ತು ಕೂಡಲ ಸಂಗಮ ಸ್ವಾಮೀಜಿ ಮಧ್ಯೆ ವೈಮನಸ್ಸು ಇರುವುದು ನಿಜ. ಕೂಡಲ ಸಂಗಮ ಪೀಠವನ್ನು ಜನರು ಒಪ್ಪಿಕೊಂಡಿದ್ದಾರೆ. 2ಎ ಮೀಸಲಾತಿ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದು, ಜಯ ಮೃತ್ಯುಂಜಯ ಸ್ವಾಮೀಜಿ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ಶಾಕ್ ನೀಡಿದ ಸಿಎಂ: ಸ್ಫೋಟಗೊಳ್ಳುವುದೇ ಅಸಮಾಧಾನ?