ETV Bharat / city

ಸಚಿವ ಸ್ಥಾನ ಕೇಳಿಲ್ಲ, ನೀಡಿದರೆ ನಿಭಾಯಿಸುವೆ; ಶಾಸಕ ಬೆಲ್ಲದ - ಧಾರವಾಡ ಲೇಟೆಸ್ಟ್​ ನ್ಯೂಸ್

ಎಲ್ಲಾ ಎಂಎಲ್​​ಎಗಳಿಗೂ ಸಚಿವರಾಗೋ ಆಕಾಂಕ್ಷೆ ಇರುತ್ತದೆ. ಯಾರನ್ನು ತಗೋಬೇಕು, ಯಾರನ್ನ ಬಿಡಬೇಕು ಎಂಬುದನ್ನು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ.‌ ನನಗಿನ್ನೂ ವಯಸ್ಸಿದೆ.‌ ಪಾಲಿಟಿಕ್ಸ್​ ಇಸ್ ಎ ಲಾಂಗ್ ರೇಸ್ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

Mla Aravinda Bellada statemeny about cabinet extension
ಎಲ್ಲರಿಗೂ ಸಚಿವರಾಗೋ ಆಕಾಂಕ್ಷೆ ಇರುತ್ತೆ, ಸಚಿವ ಸ್ಥಾನ ನೀಡಿದ್ರೆ ಒಳ್ಳೆಯದು: ಅರವಿಂದ ಬೆಲ್ಲದ
author img

By

Published : Jan 11, 2021, 2:34 PM IST

ಧಾರವಾಡ: ಸಚಿವ ಸ್ಥಾನ ನೀಡಿದ್ರೆ ಒಳ್ಳೆಯದು. ಇಲ್ಲದಿದ್ದರೆ ಯಾವ ಜವಾಬ್ದಾರಿ ನೀಡುತ್ತಾರೋ ಅದನ್ನು ಒಳ್ಳೆಯ ರೀತಿಯಿಂದ ಮಾಡುವೆ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.

ಎಲ್ಲರಿಗೂ ಸಚಿವರಾಗೋ ಆಕಾಂಕ್ಷೆ ಇರುತ್ತೆ, ಸಚಿವ ಸ್ಥಾನ ನೀಡಿದ್ರೆ ಒಳ್ಳೆಯದು: ಅರವಿಂದ ಬೆಲ್ಲದ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಬೇಕೆಂದು ಕೇಳಿಲ್ಲ, ನೀಡಿದ್ರೆ ಒಳ್ಳೆಯದು. ಇಲ್ಲದಿದ್ದರೆ ಯಾವ ಜವಾಬ್ದಾರಿ ನೀಡುತ್ತಾರೋ ಅದನ್ನು ಒಳ್ಳೆಯ ರೀತಿಯಿಂದ ಮಾಡುವೆ. ಸದ್ಯ ಜಿಲ್ಲಾಧ್ಯಕ್ಷ ಸ್ಥಾನವಿದೆ ಮುಂದೆ ಕಾದು ನೋಡೋಣ ಎಂದರು.

ಇನ್ನು, ಏಳು ಜನರಿಗೆ ಸಚಿವ ಸ್ಥಾನ ಸಿಗಲಿದೆ ಅಂತ ಮಾಧ್ಯಮಗಳಿಂದ ಗೊತ್ತಾಗಿದೆ. ನಮ್ಮ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ. ಎಲ್ಲಾ ಎಂಎಲ್​​ಎಗಳಿಗೂ ಸಚಿವರಾಗೋ ಆಕಾಂಕ್ಷೆ ಇರುತ್ತದೆ. ಯಾರನ್ನು ತಗೋಬೇಕು, ಯಾರನ್ನ ಬಿಡಬೇಕು ಎಂಬುದನ್ನು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ.‌ ನನಗಿನ್ನೂ ವಯಸ್ಸಿದೆ,‌ ಪಾಲಿಟಿಕ್ಸ್​ ಇಸ್ ಎ ಲಾಂಗ್ ರೇಸ್ ಎಂದರು.

ಮೂಲ‌ ಬಿಜೆಪಿಗರಿಗೆ ಮನ್ನಣೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷಕ್ಕಾಗಿ ಮೊದಲಿನಿಂದಲೂ ದುಡಿದವರಿಗೆ ಸಚಿವ ಸ್ಥಾನ ಕೊಡಬೇಕು ಅಂತ ಇರುತ್ತದೆ. ಆದರೆ, ರಾಜಕಾರಣ ಅಂದರೆ ಬ್ಯಾಲೆನ್ಸ್ ಮಾಡಲೇಬೇಕಾಗುತ್ತದೆ. ಆ ಬ್ಯಾಲೆನ್ಸ್ ಮಾಡುವ ವಿಚಾರವಾಗಿ ಸಿಎಂ ನಿರ್ಧಾರ ಮಾಡುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.