ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಕುತಂತ್ರ ವ್ಯಕ್ತಿಗಳ ಷಡ್ಯಂತ್ರ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಸಾರಿಗೆ ಸಂಸ್ಥೆ ಅದೊಂದು ನಿಗಮ. ರಾಜ್ಯದಲ್ಲಿ ಈ ರೀತಿಯ 116 ನಿಗಮಗಳಿವೆ. ಇವರ ಬೇಡಿಕೆಗೆ ಬಗ್ಗಿದ್ರೆ ಉಳಿದವರೂ ಹೋರಾಟಕ್ಕಿಳೀತಾರೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದ್ರೆ ಎಲ್ಲರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕಾಗುತ್ತೆ. ಹಾಗಾದಲ್ಲಿ ಸರ್ಕಾರದ ಬಜೆಟ್ ಪೂರ್ತಿ ಇವರಿಗೆ ಕೊಡಬೇಕಾಗುತ್ತೆ. ಇದು ಸಾರಿಗೆ ಕಾರ್ಮಿಕರು ಮಾಡ್ತಿರೋ ಹೋರಾಟವಲ್ಲ. ಸಾರಿಗೆ ಮುಷ್ಕರ ಕೆಲ ಕುತಂತ್ರ ವ್ಯಕ್ತಿಗಳ ಷಡ್ಯಂತ್ರ. ತಾವು ಹಿಂದೆ ಇದ್ದುಕೊಂಡು ಸಾರಿಗೆ ನೌಕರರನ್ನು ಮುಂದೆಬಿಟ್ಟಿದ್ದಾರೆ ಎಂದರು.
ಕೊರೊನಾ ಸಂದರ್ಭದಲ್ಲಿ ಮುಷ್ಕರ ಕೈ ಬಿಡಬೇಕು. ನಂತರದಲ್ಲಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲಾಗುವುದು. ನಿಮ್ಮ ಬಗ್ಗೆ ನಮ್ಮ ಸಹಾನುಭೂತಿ ಇದೆ. ಹೋರಾಟವನ್ನು ಕೈ ಬಿಟ್ಟು ಬನ್ನಿ. ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರು ಸಮಸ್ಯೆ ಬಗೆಹರಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: 6ನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ, ಹಠ ಬಿಟ್ಟು ಕರ್ತವ್ಯದಲ್ಲಿ ತೊಡಗಿಕೊಳ್ಳಿ: ಸಿಎಂ
ನೀರು ಸದ್ಬಳಕೆಗೆ ಮಾಡೋಕೆ ಜಲ ಶಕ್ತಿ ಯೋಜನೆ ಜಾರಿ ಮಾಡಲಾಗಿದೆ. ಕ್ಯಾಚ್ ದಿ ರೇನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು. ಉಪ ಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.