ಹುಬ್ಬಳ್ಳಿ: ಸ್ನಾತಕೋತ್ತರ ಪದವೀಧರರು ಚುನಾವಣಾ ಕಣಕ್ಕೆ ಇಳಿದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪದವಿ, ಸ್ನಾತಕೋತ್ತರ ಪದವೀಧರರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
- " class="align-text-top noRightClick twitterSection" data="">
ಬಿಜೆಪಿ ಅಭ್ಯರ್ಥಿಗಳಲ್ಲಿ ಒಬ್ಬರು ಎಂಬಿಬಿಎಸ್, ಇಬ್ಬರು ಎಂಬಿಎ ಹಾಗೂ ಒಬ್ಬರು ಎಂಜಿನಿಯರಿಂಗ್ ಪದವಿ ಪಡೆದರೆ ಉಳಿದಂತೆ 28 ಮಂದಿ ಪದವಿ ಪಡೆದಿದ್ದಾರೆ. ಎಎಪಿಯಲ್ಲಿ ಮೂವರು ಎಂಎ, ಇಬ್ಬರು ಎಂಜಿನಿಯರಿಂಗ್, 9 ಮಂದಿ ಪದವೀಧರರಿದ್ದಾರೆ.
ಕಾಂಗ್ರೆಸ್ನಲ್ಲಿ 7 ಮಂದಿ ಸ್ನಾತಕೋತ್ತರ, 11 ಪದವೀಧರರು, ಇಬ್ಬರು ಎಂಬಿಬಿಎಸ್, ನಾಲ್ವರು ಎಂಜಿನಿಯರಿಂಗ್, ಒಬ್ಬರು ಎಂಟೆಕ್ ಮತ್ತೊಬ್ಬರು ಎಲ್ಎಲ್ಬಿ ಓದಿದ್ದಾರೆ.
ಅದರಲ್ಲೂ ಬಿಜೆಪಿಯಿಂದ ಎಂಬಿಎ ಪದವೀಧರೆ ಸ್ನೇಹ ಹಂಜಿ ಹಾಗೂ ಕಾಂಗ್ರೆಸ್ನಿಂದ ಡಾ.ಅಮ್ರಪಾಲಿ ಜಕ್ಕಪ್ಪನವರ್ ಹಾಗೂ ಎಎಪಿಯಿಂದ ಬಿಕಾಂ ಓದುತ್ತಿರುವ ರೋಹಿಣಿ ಸೋಮನಕಟ್ಟಿ ಸೇರಿದಂತೆ ಸಾಕಷ್ಟು ಮಹಿಳಾ ಮಣಿಗಳು ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಸೆ. 3ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ ಡಿಸಿ ಆದೇಶದ ವಿರುದ್ಧ ಈಶ್ವರಪ್ಪ ಕಿಡಿ: ಸಿದ್ದರಾಮಯ್ಯ, ಹೆಚ್ಡಿಕೆಗೆ ಟಾಂಗ್