ಹುಬ್ಬಳ್ಳಿ: ಬಹುಮಹಡಿ ಕಟ್ಟಡವೊಂದರ ಐದನೇಯ ಮಹಡಿಯಿಂದ ವ್ಯಕ್ತಿಯೊಬ್ಬ ಬಿದ್ದು ಸಾವಿಗೀಡಾದ ಘಟನೆ ನಗರದ ಮಿಡ್ ಮ್ಯಾಕ್ ಲೇಔಟ್ ಬಳಿ ಸಂಭವಿಸಿದೆ.
ಮಂಟೂರ ರಸ್ತೆಯ ನಿವಾಸಿಯಾದ ಪೋತಯ್ಯ ರೊಡ್ಡ(35) ಎಂಬಾತನೇ ಐದನೇಯ ಮಹಡಿಯಿಂದ ಬಿದ್ದು ಪ್ರಾಣವನ್ನ ಕಳೆದುಕೊಂಡಾತ. ನರೇಂದ್ರ ಹೆಸರಿನ ಬಹುಮಹಡಿ ಅಪಾರ್ಟ್ಮೆಂಟ್ಗೆ ಬಣ್ಣ ಬಳಿಯುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಅತಿಯಾದ ಎತ್ತರದಿಂದ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈತ ಹಲವು ತಿಂಗಳಿಂದ ನಿರಂತರವಾಗಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಘಟನೆ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.