ಧಾರವಾಡ: ಮಾನವೀಯತೆಯೇ ಶ್ರೇಷ್ಠವಾದ ನ್ಯಾಯ ಮತ್ತು ಕಾನೂನು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು. ರಾಜ್ಯ ಕಾನೂನು ವಿವಿ 5ನೇ ಘಟಿಕೋತ್ಸವ ಭಾಷಣದಲ್ಲಿ ಮಾತನಾಡಿದ ಅವರು, ಮನುಷ್ಯತ್ವಕ್ಕಿಂತ ದೊಡ್ಡ ಕಾನೂನು ಯಾವುದೂ ಇಲ್ಲ. ಮಾನವೀಯತೆ ಅತ್ಯಂತ ಶ್ರೇಷ್ಠ ನ್ಯಾಯ-ಕಾನೂನು. ನ್ಯಾಯ ಮತ್ತು ಸಮಾನತೆ ಉಳಿಸಲು ನಮ್ಮ ಹೋರಾಟ ನಡೆಯಬೇಕು ಎಂದರು.
ಜೀವನದಲ್ಲಿ ಹಣವೇ ಬಹಳ ಶ್ರೇಷ್ಠ ಅಂತಾ ನಾವು ಭಾವಿಸಬಾರದು. ನಾವೆಲ್ಲ ಚೆನ್ನಾಗಿರೋ ಮನೆಯಿಂದಲೇ ಬಂದವರೇ ಆದರೂ, ರಾಜಕಾರಣ ಮಾಡಿ ಹೀಗೆ ಬೆಳೆದಿದ್ದೇವೆ. ಹೀಗೆ ಬೆಳೆಯಬೇಕಾದರೆ ಹೋರಾಟವನ್ನೇ ಮಾಡಿದ್ದೇವೆ. ನಾವು ಬೇರೆಯವರಿಗಿಂತ ಭಿನ್ನವಾಗಿ ಕಾಣಬೇಕು. ಅದಕ್ಕಾಗಿ ಹೋರಾಟದ ಮೂಲಕ ಬೆಳೆಯಬೇಕು. ಗುರುತಿಸಿಕೊಳ್ಳುವುದು ಸುಲಭ, ಆದರೆ ಗೌರವಿಸಿಕೊಳ್ಳುವುದು ಬಹಳ ಕಷ್ಟ. ಗೌರವಿಸಿಕೊಳ್ಳಬೇಕಾದರೆ ಅನೇಕ ತ್ಯಾಗ ಮಾಡಬೇಕಾಗುತ್ತದೆ. ಸಾಧನೆಗಳನ್ನು ಮಾಡಬೇಕಾಗುತ್ತದೆ ಎಂದರು.
ಘಟಿಕೋತ್ಸವದಲ್ಲಿ ಭಾವುಕ ಕ್ಷಣ: ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು. ನ್ಯಾಯಮೂರ್ತಿ ಮೋಹನ್ ಶಾಂತನಗೌಡರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡುವ ವೇಳೆ ವೇದಿಕೆಯ ಮೇಲೆಯೇ ಅವರ ಪತ್ನಿ ಸುನೀತಾ ಮೋಹನ್ ಶಾಂತನಗೌಡರು ಗದ್ಗದಿತರಾದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಎಲ್ಲ ವಿದ್ಯಾರ್ಥಿಗಳಿಗೆ ಪದವಿ, ಡಾಕ್ಟರೇಟ್ ಪ್ರದಾನ ಮಾಡಿದರು.
ಓದಿ: ಬಿಜೆಪಿ ಪ್ರಯೋಗಿಸುತ್ತಿರುವ 'ಭಾವನಾಸ್ತ್ರಗಳಿಗೆ' ಹಿಟ್ ವಿಕೆಟ್ ಆಗುತ್ತಿರುವ ಕಾಂಗ್ರೆಸ್ ನಾಯಕರು!