ಧಾರವಾಡ: ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ಕೊರೊನಾ ಕಂಟಕವಾಗುತ್ತಿದೆ. ಇದರ ಜೊತೆಗೆ ಶೀಘ್ರದಲ್ಲೇ ಪೊಲೀಸರು ಕೊರೊನಾ ಗೆದ್ದು ಸೇವೆಗೆ ಹಾಜರಾಗುತ್ತಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಕೊರೊನಾ ವಿರುದ್ಧ ಹೋರಾಡಿ ಇದೀಗ ಕರ್ತವ್ಯಕ್ಕೆ ಮರಳಿದ್ದಾರೆ. ಅವರಿಗೆ ಎಸಿಪಿ ಅನುಷಾ ಹೂಮಾಲೆ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ಈ ಮಹಿಳಾ ಹೆಡ್ ಕಾನ್ಸ್ಟೇಬಲ್ಗೆ ಕಳೆದ ಜುಲೈ ಎರಡರಂದು ಕೋವಿಡ್ ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಹೋಂ ಕ್ವಾರೈಂಟೈನ್ ಮುಗಿಸಿ ಇದೀಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಬಗ್ಗೆ ಎಸಿಪಿ ಅನುಷಾ ಮಾತನಾಡಿ, ಪೊಲೀಸರು ಜನರೊಂದಿಗೆ ಒಡನಾಟ ಹೊಂದಿರುತ್ತೀರಿ. ಹೀಗಾಗಿ ಯಾವಾಗಲೂ ಕೈ ತೊಳೆಯುತ್ತಿರಿ. ಸಾಮಾಜಿಕ ಅಂತರ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಿ. ಕೊರೊನಾಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಪೊಲೀಸರಿಗೆ ಧೈರ್ಯ ತುಂಬಿದರು.