ಹುಬ್ಬಳ್ಳಿ: ದಿವಂಗತ ಸಿ ಎಸ್ ಶಿವಳ್ಳಿಯವರ ಸಮಾಧಿಯ ದರ್ಶನ ಪಡೆದ ಶಿವಳ್ಳಿಯವರ ಪತ್ನಿ, ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಕಣ್ಣೀರು ಹಾಕಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಸುಮಾ ಇಂದು ನಾಮಪತ್ರ ಸಲ್ಲಿಸಿದರು. ಬೆಳಗ್ಗೆಯಿಂದ ರೋಡ್‌ಶೋ, ನಾಮಪತ್ರ ಸಲ್ಲಿಕೆಯಲ್ಲಿ ಅವರು ಬ್ಯುಸಿಯಾಗಿದ್ದರು. ಹೀಗಾಗಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿರುವ ಸಿ. ಎಸ್. ಶಿವಳ್ಳಿಯವರ ಸಮಾಧಿಗೆ ಸಂಜೆ ಮಗ ಅಮರಶಿವ ಸೇರಿದಂತೆ ಸಂಬಂಧಿಕರೊಂದಿಗೆ ತೆರಳಿ ಸಮಾಧಿಯ ದರ್ಶನ ಪಡೆದರು.
ಈ ವೇಳೆ ತಮ್ಮ ಪತಿಯನ್ನು ನೆನೆದು ಕುಸುಮಾ ಭಾವುಕರಾದರು. ಇದೇ ವೇಳೆ ಶಿವಳ್ಳಿಯವರ ಸಮಾಧಿಯ ಮೇಲೆ ಅಭಿಮಾನಿಗಳು ಕಾಂಗ್ರೆಸ್ ಬಾವುಟ ನೆಟ್ಟು ಜಯಘೋಷ ಹಾಕಿದರು.