ETV Bharat / city

ಸಮಾಜದ ಉದ್ಧಾರಕ್ಕಾಗಿ ನಾನು ಕೆಎಲ್​ಇಗೆ ಜಮೀನು ನೀಡಿದ್ದೇನೆ: ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ - KLE Medical College

ನನ್ನ ಬಗ್ಗೆ ಇಲ್ಲಸಲ್ಲದ ಪ್ರಚಾರ ಮಾಡುತ್ತಿದ್ದಾರೆ‌. ನಾನು ಆಸ್ತಿ ಹೊಡೆದಿದ್ದೇನೆ, ಮಾರಿದ್ದೇನೆ ಅಂತ ಪ್ರಚಾರ ಮಾಡುತ್ತಿದ್ದಾರೆ. ಅನೇಕ ಕಡೆ ಮಠಗಳು ಸಮಾಜದ ಉದ್ಧಾರಕ್ಕಾಗಿ ಜಮೀನು ನೀಡಿವೆ. ಹಾಗೆಯೇ ನಾನು ಕೆಎಲ್​ಇ ಸಂಸ್ಥೆಗೆ ಜಮೀನು ನೀಡಿದ್ದೇನೆ ಎಂದು ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದ್ದಾರೆ.

kle-medical-college-inauguration-in-hubli
ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ
author img

By

Published : Dec 24, 2020, 7:04 PM IST

ಹುಬ್ಬಳ್ಳಿ: ಅನೇಕ ಕಡೆ ಮಠಗಳು ಸಮಾಜದ ಉದ್ಧಾರಕ್ಕಾಗಿ ಜಮೀನು ನೀಡಿವೆ. ಹಾಗೆಯೇ ನಾನು ಕೆಎಲ್​ಇ ಸಂಸ್ಥೆಗೆ ಜಮೀನು ನೀಡಿದ್ದೇನೆ ಎಂದು ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದ್ದಾರೆ.

ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ
ನಗರದ ಗಬ್ಬೂರು ಬೈಪಾಸ್ ಪಕ್ಕದಲ್ಲಿ ಕೆಎಲ್​ಇ ಮೆಡಿಕಲ್‌ ಕಾಲೇಜು ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಬಗ್ಗೆ ಇಲ್ಲಸಲ್ಲದ ಪ್ರಚಾರ ಮಾಡುತ್ತಿದ್ದಾರೆ‌. ನಾನು ಆಸ್ತಿ ಹೊಡೆದಿದ್ದೇನೆ, ಮಾರಿದ್ದೇನೆ ಅಂತ ಪ್ರಚಾರ ಮಾಡುತ್ತಿದ್ದಾರೆ. ಅನೇಕ ಕಡೆ ಮಠಗಳು ಸಮಾಜದ ಉದ್ಧಾರಕ್ಕಾಗಿ ಜಮೀನು ನೀಡಿವೆ. ಹಾಗೆಯೇ ನಾನು ಕೆಎಲ್​ಇ ಸಂಸ್ಥೆಗೆ ಜಮೀನು ನೀಡಿದ್ದೇನೆ. ಅದು ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನೀಡಿದ್ದೇನೆ. ನನ್ನಲ್ಲಿ ಸತ್ಯ, ಪ್ರಾಮಾಣಿಕತೆ ಇದೆ‌. ನಾನು ಒಮ್ಮೆ ಮಠ ತೊರೆದು ಹೋಗಿದ್ದೆ. ಹೊರಟ್ಟಿಯವರು ಮಠ ಬಿಟ್ಟು ಹೋದವರು ವಾಪಸ್ ಯಾಕೆ ಬಂದರು ಎಂದಿದ್ದರು‌. ಅವರ ಮಾತು ಈಗಲೂ ಸ್ವಾಗತರ್ಹ ಅನ್ನಿಸುತ್ತಿದೆ‌. ಈಗ ಓರ್ವ ಸ್ವಾಮೀಜಿ ಆರೋಪ ಮಾಡುತ್ತಿದ್ದಾರೆ‌ ಎಂದು ಪರೋಕ್ಷವಾಗಿ ದಿಂಗಾಲೇಶ್ವರ ಶ್ರೀಗಳ ವಿರುದ್ಧ ವಾಗ್ದಾಳಿ‌ ನಡೆಸಿದರು. ಒಬ್ಬರು ನಾನು ಉತ್ತರಾಧಿಕಾರಿ ಎನ್ನುತ್ತಿದ್ದಾರೆ‌. ನಾನು ವಾಪಸ್ ಬಂದಿದ್ದೇ ಮಠದ ಒಳ್ಳೆಯದಕ್ಕಾಗಿ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.