ETV Bharat / city

MLC Election: ಇಂದು ಯಾರೆಲ್ಲ ನಾಮಪತ್ರ ಹಿಂಪಡೆದ್ರು, ಅಂತಿಮವಾಗಿ ಯಾರೆಲ್ಲ ಕಣದಲ್ಲಿ?

author img

By

Published : Nov 26, 2021, 9:49 PM IST

ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನವಾದ್ದರಿಂದ ಹಲವರು ಸ್ಪರ್ಧೆಯಿಂದ ಹಿಂದೆ ಸರಿದರು.

Karnataka Council election nomination,Candidate List of Karnataka MLC Election
MLC Election

ಮಂಗಳೂರು/ಶಿವಮೊಗ್ಗ/ಧಾರವಾಡ: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸಲ್ಲಿಸಿದ್ದ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು. ಅಂತೆಯೇ ಕೆಲವರು ಇಂದು ಕಣದಿಂದ ಹಿಂದೆ ಸರಿದರು. ಕೆಲವರು ಅಂತಿಮವಾಗಿ ಕಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಚುನಾವಣೆ ಸ್ಪರ್ಧಿಸಿದಿ ನಾಮಪತ್ರ ಸಲ್ಲಿಸಿದ್ದ 11 ಅಭ್ಯರ್ಥಿಗಳ ಪೈಕಿ ಒಬ್ಬ ಅಭ್ಯರ್ಥಿ ಇಂದು ತನ್ನ ನಾಮಪತ್ರ ಹಿಂಪಡೆದುಕೊಂಡರು. ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಅಂತಿಮವಾಗಿ ಚುನಾವಣಾ ಕಣದಲ್ಲಿ ಬಿಜೆಪಿಯ ಪ್ರದೀಪ ಶಿವಪ್ಪ ಶೆಟ್ಟರ, ಕಾಂಗ್ರೆಸ್​ನ ಸಲೀಂ ಅಹ್ಮದ, ಜೆಡಿಎಸ್​ನಿಂದ ತಳವಾರ ಶಿವಕುಮಾರ ಮಹಾದೇವಪ್ಪ ಹಾಗೂ ಪಕ್ಕೀರಡ್ಡಿ ವೀರಪ್ಪ ಅತ್ತಿಗೇರಿ ಮತ್ತು ಪಕ್ಷೇತರರಾದ ಈರಪ್ಪ ಬಸನಗೌಡ ಗುಬ್ಬೇರ, ಬಸವರಾಜ ಶಂಕ್ರಪ್ಪ ಕೊಟಗಿ, ಮಲ್ಲಿಕಾರ್ಜುನ ಚನ್ನಬಸಪ್ಪ ಹಾವೇರಿ, ಮಹೇಶ ಗಣೇಶಭಟ್ಟ ಜೋಶಿ, ಮಂಜುನಾಥ ಗಣೇಶಪ್ಪ ಅಡ್ಮನಿ ಹಾಗೂ ವೀರುಪಾಕ್ಷಗೌಡ ಗೌಡಪ್ಪಗೌಡ ಪಾಟೀಲ ಇದ್ದಾರೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ: MLC ಚುನಾವಣೆ ಕಣದಲ್ಲಿ ನಾಲ್ವರು

ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಸಿದ್ದ 6 ಅಭ್ಯರ್ಥಿಗಳಲ್ಲಿ ಅಂತಿಮವಾಗಿ 4 ಅಭ್ಯರ್ಥಿಗಳು ಅಂತಿಮವಾಗಿ ಸ್ಪರ್ಧೆಗೆ ಸಿದ್ಧವಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ತೀರ್ಥಹಳ್ಳಿಯ ಗುತ್ತಿ ಎಡೆಹಳ್ಳಿಯ ಭುಜಂಗ ತಮ್ಮ ನಾಮಪತ್ರ ವಾಪಸ್ ಪಡೆದರು. ನಿನ್ನೆ ಕಾಂಗ್ರೆಸ್ ಸೇವಾದಳದ ವೈ.ಹೆಚ್.ನಾಗರಾಜ್ ನಾಮಪತ್ರ ಹಿಂಪಡೆದಿದ್ದಾರೆ. ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ನಂತರ ಒಟ್ಟು ಆರು ಜನ ಕಣದಲ್ಲಿ ಉಳಿದವರ ವಿವರ:
ಬಿಜೆಪಿ ಪಕ್ಷದಿಂದ ಡಿ.ಎಸ್.ಅರುಣ್, ಕಾಂಗ್ರೆಸ್​ನಿಂದ ಆರ್. ಪ್ರಸನ್ನ ಕುಮಾರ್, ಜೆಡಿಯುನಿಂದ ಶಶಿಕುಮಾರ್ ಗೌಡ, ಪಕ್ಷೇತರ ಅಭ್ಯರ್ಥಿಯಾಗಿ ರವಿ ಕಣದಲ್ಲಿದ್ದಾರೆ.

ದಕ್ಷಿಣ ಕನ್ನಡದಲ್ಲಿ 7 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಮೂವರು ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇಂದು ನಾಲ್ವರು ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದುಕೊಂಡರು. ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ನಿತಿನ್ ಕುಮಾರ್, ಕೌಶಿಕ್ ಡಿ ಶೆಟ್ಟಿ, ನವೀನ್ ಕುಮಾರ್ ರೈ ಹಾಗೂ ಶಶಿಧರ್ ಎಂ. ನಾಮಪತ್ರ ವಾಪಸ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್​ನಿಂದ ಮಂಜುನಾಥ ಭಂಡಾರಿ, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಶಾಫಿ ಕೆ. ಕಣದಲ್ಲಿ ಉಳಿದಿದ್ದಾರೆ. ಡಿಸೆಂಬರ್ 10ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ: ಹೆಬ್ಬಾಳ್ಕರ್-ಜಾರಕಿಹೊಳಿ ಕುಟುಂಬಕ್ಕೆ ಪ್ರತಿಷ್ಠೆಯಾದ ಪರಿಷತ್ ಚುನಾವಣೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.