ETV Bharat / city

ರಮೇಶ್​ ಕುಮಾರ್​ ಒಳ್ಳೆ ಸಂಸದೀಯ ಪಟು ಆಗಿದ್ದವರು, ಅವರ ಈ ನಡವಳಿಕೆ ಸರಿಯಲ್ಲ - ಜಗದೀಶ್ ಶೆಟ್ಟರ್

ಅವರು ಒಬ್ಬ ಸ್ಪೀಕರ್ ಆಗಿ ಕೆಲಸ ಮಾಡಿದವರು. ಮಾತನಾಡುವಾಗ ಬಹಳಷ್ಟು ಯೋಚಿಸಿ ಮತನಾಡಬೇಕಿತ್ತು ಎಂದು ಅತ್ಯಾಚಾರ ಕುರಿತ ರಮೇಶ್ ಕುಮಾರ್ ಅವರ ವಿವಾದಾತ್ಮಕ ಹೇಳಿಕೆಯನ್ನು ಜಗದೀಶ್ ಶೆಟ್ಟರ್ ಖಂಡಿಸಿದ್ದಾರೆ.

Jagadish Shettar on Ramesh Kumar's controversial statement
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಜಗದೀಶ್ ಶೆಟ್ಟರ್
author img

By

Published : Dec 17, 2021, 5:08 PM IST

ಹುಬ್ಬಳ್ಳಿ: ಸದನದಲ್ಲಿ ರಮೇಶ್ ಕುಮಾರ್​​ ಅವರಂತಹ ಹಿರಿಯರು ಆ ರೀತಿ ಹೇಳಬಾರದಾಗಿತ್ತು. ಅವರು ಯಾಕೆ ಹೇಳಿದ್ರು ಅಂತ ಅರ್ಥ ಆಗಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗದರಲ್ಲಿಂದು ಮಾತನಾಡಿದ ಅವರು, ಈ ರೀತಿ ಶಬ್ದ ಪ್ರಯೋಗ ಅಥವಾ ಮಹಿಳೆಯರ ಬಗ್ಗೆ ಮಾತನಾಡೋದು ಸರಿ ಅಲ್ಲ. ರಮೇಶ್ ಕುಮಾರ್ ಈ ಬಗ್ಗೆ ಸ್ಪಷ್ಟಿಕರಣ ಕೊಡಬೇಕು. ನಿನ್ನೆಯೇ ಆ ಬಗ್ಗೆ ಕ್ಷಮೆ ಕೇಳಬೇಕಿತ್ತು, ಇವತ್ತು ಕೇಳಿದ್ದಾರೆ.

ಒಳ್ಳೆ ರೀತಿಯ ಸಂಸದೀಯ ಪಟು ಆಗಿದ್ದವರ ನಡುವಳಿಕೆ ಇದಲ್ಲ. ಅವರು ಒಬ್ಬ ಸ್ಪೀಕರ್ ಆಗಿ ಕೆಲಸ ಮಾಡಿದವರು. ಮಾತನಾಡುವಾಗ ಬಹಳಷ್ಟು ಯೋಚಿಸಿ ಮತನಾಡಬೇಕಿತ್ತು ಎಂದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಜಗದೀಶ್ ಶೆಟ್ಟರ್

ಸದನದಲ್ಲಿ ನಾವು ಸರ್ಕಾರ ನಡೆಸೋಕೆ, ಉತ್ತರ ಕೊಡೋಕೆ ಸಿದ್ಧವಾಗಿರ್ತೀವಿ. ಸ್ಪಷ್ಟವಾಗಿ ಅವರು ಯಾವುದನ್ನ ಮಂಡಿಸಬೇಕು ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಸದನದಲ್ಲಿ ಧರಣಿ ಮಾಡುವುದು, ಬಾಯ್ಕಾಟ್ ಮಾಡೋದು, ಬೀದಿಲಿ ಪ್ರತಿಭಟನೆ ಮಾಡೋದೆಲ್ಲ ಕಾಂಗ್ರೆಸ್​​ನ ರಾಜಕೀಯ ಗಿಮಿಕ್.

ಈ ಭಾಗದ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ ಸರ್ಕಾರಕ್ಕೆ ಸಲಹೆ ನೀಡಲಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅದಕ್ಕೆ ಯಾವುದೇ ಆಧಾರ ಇಲ್ಲ. ಸರಿಯಾಗಿ ಸದನ ನಡೆಯದೇ ಇರೋದಕ್ಕೆ ಕಾಂಗ್ರೆಸ್ಸಿಗರ ಅಸಹಕಾರ ಕಾರಣ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅತ್ಯಾಚಾರದ ಕುರಿತ ಹೇಳಿಕೆ.. ಮಹಿಳೆಯರಿಗೆ ನೋವಾಗಿದ್ರೆ ಪ್ರಾಮಾಣಿಕವಾಗಿ ಕ್ಷಮೆ ಕೋರುವೆ.. ರಮೇಶ್​ ಕುಮಾರ್​

ಮತಾಂತರ ನಿಷೇಧ ಕಾಯ್ದೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಯಂಪ್ರೇರಿತ ಮತಾಂತರಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಬಲವಂತವಾಗಿ ಇವತ್ತು ಮತಾಂತರ ನಡೆಯುತ್ತಿದೆ‌. ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದಕ್ಕೆ ನಮ್ಮ ತಡೆ ಇದೆ.

ಯಾವುದೇ ಸಮುದಾಯ ಇರಲಿ ಮತಾಂತರ ನಿಷೇಧ ಕಾಯ್ದೆ ಕಾಂಗ್ರೆಸ್​​​ಗೆ ಯಾಕೆ ಅನ್ವಯವಾಗುತ್ತೆ. ಬಿಲ್​​ನಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರ ಅಂತ ಇರೋದಿಲ್ಲ. ನೀವು ತಪ್ಪು ಮಾಡದಿದ್ದರೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ಮಹಾದಾಯಿ ವಿಚಾರದಲ್ಲಿ ಕೆಲ ಕಾನೂನು ತೊಡಕಿದೆ. ಕೋರ್ಟ್​ನಲ್ಲಿ ಕೇಸ್ ಪೆಂಡಿಂಗ್ ಇದೆ, ಸರ್ಕಾರದ ಹಂತದಲ್ಲಿ ಬಗೆಹರಿಸಬೇಕಾಗುತ್ತೆ. ನ್ಯಾಯಾಲಯದಲ್ಲಿ ನಮಗೆ ಮಹದಾಯಿ ನೀರಿನ ಬಗ್ಗೆ ಹಕ್ಕಿದೆ ಅನ್ನೋ ತೀರ್ಪು ಬಂದಿದೆ. ನಮಗೆ ಬರಬೇಕಾದ ನೀರು ನಮಗೆ ಬರೋದು ನಿಶ್ಚಿತ ಎಂದು ಶೆಟ್ಟರ್ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.