ETV Bharat / city

ಜು.24ರ ಬಳಿಕ ಲಾಕ್​ಡೌನ್ ಇರಲ್ಲ:  ಸಚಿವ ಜಗದೀಶ ಶೆಟ್ಟರ್​ ಮುನ್ಸೂಚನೆ

author img

By

Published : Jul 21, 2020, 1:44 PM IST

ಲಾಕ್​ಡೌನ್ ವಿಸ್ತರಣೆಯೇ ಪರಿಹಾರ ಅಲ್ಲ. ಹೀಗಾಗಿ 25ರ ನಂತರ ಲಾಕ್​ಡೌನ್ ವಿಸ್ತರಣೆ ಬಹುತೇಕ ಡೌಟ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

jagadeesh shettar
jagadeesh shettar

ಹುಬ್ಬಳ್ಳಿ: ಜುಲೈ 24ರ ಬಳಿಕ ಧಾರವಾಡ ಜಿಲ್ಲೆಯಲ್ಲಿ ಲಾಕ್​ಡೌನ್ ಇರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮುನ್ಸೂಚನೆ ನೀಡಿದ್ದಾರೆ.

ನಗರದಲ್ಲಿ ಇಂದು ಲಾಕ್​ಡೌನ್ ಕುರಿತು ಹೇಳಿಕೆ ನೀಡಿದ ಅವರು, ಧಾರವಾಡ ಜಿಲ್ಲೆಯಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಚಿವ ಸಂಪುಟದಲ್ಲಿ ಸಿಎಂ ಜೊತೆ ಚರ್ಚೆ ಮಾಡಲಾಗುವುದು. ಆದರೆ, ಲಾಕ್​ಡೌನ್ ವಿಸ್ತರಣೆಯೇ ಪರಿಹಾರ ಅಲ್ಲ. ಹೀಗಾಗಿ 25ರ ನಂತರ ಲಾಕ್​ಡೌನ್ ವಿಸ್ತರಣೆ ಬಹುತೇಕ ಡೌಟ್ ಎಂದರು.

ಸಚಿವ ಜಗದೀಶ ಶೆಟ್ಟರ್​ ಮುನ್ಸೂಚನೆ

ಡಿಸಿ, ವೈದ್ಯರು ಹಾಗೂ ತಜ್ಞರ ಜೊತೆ ಇನ್ನೊಮ್ಮೆ ಚರ್ಚೆ ಮಾಡಿ ನಾಡಿದ್ದು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಚಿವರ ಮಧ್ಯೆ ಸಮನ್ವಯತೆ ಇಲ್ಲ ಅನ್ನೋದು ಸುಳ್ಳು. ಸರ್ಕಾರ ಸೇರಿದಂತೆ ಎಲ್ಲ ಸಚಿವರು ಪ್ರಾಮಾಣಿಕವಾಗಿ ಒಗ್ಗೂಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಅವ್ಯವಹಾರವಾಗಿಲ್ಲ. ವಿರೋಧ ಪಕ್ಷದವರು ಆರೋಪ ಮಾಡಬೇಕು ಅಂತಾ ಮಾಡಬಾರದು. ರಚನಾತ್ಮಕವಾಗಿ ಟೀಕೆ ಮಾಡಬೇಕು. ವ್ಯರ್ಥ ಆರೋಪ ಸರಿಯಲ್ಲ ಎಂದು ಕಿಡಿ ಕಾರಿದರು.

ಧಾರವಾಡ ಜಿಲ್ಲೆಯಲ್ಲಿ ಇನ್ನೂ ಎರಡು ಸಾವಿರ ಹಾಸಿಗೆಗಳು ರೆಡಿ ಇದೆ. ಆ್ಯಂಬುಲೆನ್ಸ್ ವ್ಯವಸ್ಥೆ ಸರಿಪಡಿಸಲು ಸೂಚನೆ ನೀಡಿರುವೆ. ನಾಡಿದ್ದು ಮತ್ತೆ 7 ಆ್ಯಂಬುಲೆನ್ಸ್ ಹೊಸದಾಗಿ ಬರಲಿದೆ. ಕಿಮ್ಸ್​ನಲ್ಲಿ ಹೆಚ್ಚುವರಿಯಾಗಿ ಶೀಘ್ರದಲ್ಲೇ 250 ಬೆಡ್ ವ್ಯವಸ್ಥೆ ಮಾಡಲು ಸೂಚನೆ ಮಾಡಿರುವೆ. 3-4 ದಿನಗಳಲ್ಲಿ ಕಿಮ್ಸನಲ್ಲಿ ಹೆಚ್ಚುವರಿ ಬೆಡ್ ಲಭ್ಯವಾಗಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.