ETV Bharat / city

ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಡಿಕೆಶಿಗೆ ಜಮೀರ್ ಅಹ್ಮದ್ ತಿರುಗೇಟು - : ಡಿಕೆಶಿಗೆ ಜಮೀರ್ ಅಹ್ಮದ್ ತಿರುಗೇಟು

ನಾನು ಹೆಲ್ಮೆಟ್​ ರೀತಿ ಹಿಜಾಬ್ ಹಾಕೋಬೇಕು, ಹೆಲ್ಮೆಟ್​ ಹೇಗೆ ಸೇಫ್ಟಿ ಕೊಡುತ್ತೊ ಹಾಗೇ ಹಿಜಾಬ್ ಕೂಡಾ ನೀಡುತ್ತೆ ಎಂದು ಹೇಳಿದ್ದೇನೆ. ನಾನು ಕ್ಷಮೆ ಕೇಳುವಂತ ಹೇಳಿಕೆ ಏನು ನೀಡಿದ್ದಿನಿ? ಎಂದು ಶಾಸಕ ಜಮೀರ್​ ಅಹ್ಮದ್ ಮರು ಪ್ರಶ್ನೆ ಹಾಕಿದರು.

ಜಮೀರ್ ಅಹ್ಮದ್
ಜಮೀರ್ ಅಹ್ಮದ್
author img

By

Published : Feb 14, 2022, 7:09 PM IST

Updated : Feb 14, 2022, 7:33 PM IST

ಹುಬ್ಬಳ್ಳಿ: ನಾನು ಕ್ಷಮೆ ಕೇಳುವಂತ ಹೇಳಿಕೆ ಏನು ನೀಡಿದ್ದಿನಿ? ನಾನು ಹಿಜಾಬ್ ಹಾಕಬೇಕು ಅಂತ ಹೇಳಿದ್ದೆ. ಆದರೆ, ಮಾಧ್ಯಮವರು ಅದನ್ನ ತಿರುಚಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಶಾಸಕ ಜಮೀರ್​ ಅಹ್ಮದ್​ ತಿರಗೇಟು ನೀಡಿದರು.

ನಗರದಲ್ಲಿಂದು ಮಾತಾನಾಡಿದ ಅವರು, ನಾನು ಹೆಲ್ಮೆಟ್​ ರೀತಿ ಹಿಜಾಬ್ ಹಾಕೋಬೇಕು, ಹೆಲ್ಮೆಟ್​ ಹೇಗೆ ಸೇಫ್ಟಿ ಕೊಡುತ್ತೊ ಹಾಗೇ ಹಿಜಾಬ್ ಕೂಡಾ ನೀಡುತ್ತೆ ಎಂದು ಹೇಳಿದ್ದೇನೆ. ಬಹಳ ಜನ ಹಿಜಾಬ್ ಹಾಕೋಲ್ಲ. ಹಾಗೇ ಹೆಲ್ಮೆಟ್​ ಕೂಡಾ ಕಡ್ಡಾಯವಿದ್ದರೂ ಹಾಕೋಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಜಮೀರ್ ಅಹ್ಮದ್

ಇದನ್ನೂ ಓದಿ: ಜಮೀರ್ ಹೇಳಿಕೆ ಒಪ್ಪುವುದಿಲ್ಲ, ಅವರು ಕ್ಷಮೆ ಕೋರಬೇಕು: ಡಿಕೆಶಿ

ಹೆಣ್ಣು ಮಕ್ಕಳು ಏನಕ್ಕೆ ಹಿಜಾಬ್​ ಹಾಕ್ತಾರೆ ಅನ್ನೋದಕ್ಕೆ ನಾನು ಕಾರಣ ಹೇಳಿದ್ದು ಅಷ್ಟೆ. ಅದರಿಂದ ಏನು ಲಾಭ ಅಂತ ಹೇಳಿದ್ದೆ. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಜಮೀರ್​ ಅಹ್ಮದ್​ ಸ್ಪಷ್ಟನೆ ನೀಡಿದರು.

ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತವೆ ಎಂದು ಹುಬ್ಬಳ್ಳಿಯಲ್ಲಿ ಜಮೀರ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಕಾಂಗ್ರೆಸ್ ಪಕ್ಷ ಆ ಹೇಳಿಕೆ ಒಪ್ಪುವುದಿಲ್ಲ. ಅವರು ಕ್ಷಮೆ ಕೇಳಬೇಕು ಎಂದು ತಿಳಿಸಿದ್ದರು.

Last Updated : Feb 14, 2022, 7:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.