ಹುಬ್ಬಳ್ಳಿ: ನಾನು ಸಂವಿಧಾನ ದುರುಪಯೋಗ ಮಾಡಿಕೊಂಡಿದ್ದೇನೆಂದು ನನ್ನ ಸ್ನೇಹಿತರು ಅಪಪ್ರಚಾರ ಮಾಡುತ್ತಿದ್ದಾರೆ. ಶಿಕ್ಷಕರು ನನ್ನ ಮೇಲಿಟ್ಟಿರುವ ಒಲವು ಅವರಿಗೆ ಸಹಿಸಲಾಗುತ್ತಿಲ್ಲ, ಹೀಗಾಗಿ ಅವರು ವಿಚಲಿತರಾಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿಂದು ಕೊನೆ ಹಂತದ ಪ್ರಚಾರದ ವೇಳೆ ಮಾತನಾಡಿದ ಅವರು, ನನ್ನಿಂದ ಯಾರಿಗಾದರೂ ಅನ್ಯಾಯವಾಗಿದ್ದರೆ, ದಾಖಲೆ ಸಮೇತ ಸಾಬೀತು ಮಾಡಲಿ. ಬಹಿರಂಗ ಚರ್ಚೆಗೆ ನಾನು ಸಿದ್ಧ. ನನ್ನ ಮೇಲಿನ ಆರೋಪಗಳು ಸಾಬೀತಾದರೆ ಚುನಾವಣೆಯಿಂದ ನಾನು ಹಿಂದೆ ಸರಿಯುತ್ತೇನೆ. ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರು.
ನಾನು ಯಾರಿಗೂ ಕಿರುಕುಳ ನೀಡಿಲ್ಲ. ಹಾಗೇನಾದರೂ ಮಾಡಿದ್ದರೆ ಇಷ್ಟು ಸಲ ನನ್ನನ್ನು ಯಾರೂ ಗೆಲ್ಲಿಸುತ್ತಿರಲಿಲ್ಲ. ಆರೋಪ ಮಾಡುವವರು ಸರಿಯಾದ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ನಾನು ಖಾಲಿ ಮತಪತ್ರ ಹಾಕಿದ್ದರೆ ರಾಜಕೀಯ ನಿವೃತ್ತಿ ಪಡೆಯುವೆ: ಜೆಡಿಎಸ್ ಶಾಸಕ ಶ್ರೀನಿವಾಸ್