ETV Bharat / city

ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ : ಸಿಎಂ ಯಡಿಯೂರಪ್ಪ

ನಾನು ಮತ್ತೆ ಎಪ್ರಿಲ್ 7ರಂದು ಬರುತ್ತೇನೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ಹೋಗೋದಿತ್ತು. ಕಾರಣಾಂತರದಿಂದ ಇವಾಗ ಹೊರಟಿದ್ದೇನೆ. ಅದರಲ್ಲೇನು ವಿಶೇಷವಿಲ್ಲ..

i-dont-know-what-the-cd-lady-said-in-front-of-judge
ಸಿಎಂ ಯಡಿಯೂರಪ್ಪ
author img

By

Published : Mar 30, 2021, 8:28 PM IST

ಹುಬ್ಬಳ್ಳಿ : ಸಿಡಿ ಪ್ರಕರಣದ ಸಂತ್ರಸ್ತೆ ನ್ಯಾಯಧೀಶರ ಎದುರು ಹಾಜರಾಗಿದ್ದಾರೆ‌. ಅವರೇನು ಹೇಳಿಕೆ ನೀಡಿದ್ದಾರೆ‌ ಎಂಬುವುದರ ಕುರಿತು ನನಗೆ ಗೊತ್ತಿಲ್ಲ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನ್ಯಾಯಾಧೀಶರ ಮುಂದೆ ಅವರೇನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಕಾನೂನಿನ ಪ್ರಕಾರ ಎಲ್ಲಾ ತಿಳಿದುಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದರು.

ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಸಿಎಂ ಪ್ರತಿಕ್ರಿಯೆ

ಚುನಾವಣೆ ಬಳಿಕ ಜಿಲ್ಲಾ ಉಸ್ತುವಾರಿ ಬದಲಾವಣೆ ಚರ್ಚೆ : ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆ ಬಳಿಕ ಈ ಬಗ್ಗೆ ನಿರ್ಧರಿಸುತ್ತೇವೆ. ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ‌. ಬೆಳಗಾವಿಯಲ್ಲಿ ನಮ್ಮ ಅಭ್ಯರ್ಥಿ 2.50 ಲಕ್ಷ ಮತಗಳ ಅಂತರದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, ನಾನು ಮತ್ತೆ ಎಪ್ರಿಲ್ 7ರಂದು ಬರುತ್ತೇನೆ. ನಾಳೆ ಬೆಳಗ್ಗೆ ಬೆಂಗಳೂರಿಗೆ ಹೋಗೋದಿತ್ತು. ಕಾರಣಾಂತರದಿಂದ ಇವಾಗ ಹೊರಟಿದ್ದೇನೆ. ಅದರಲ್ಲೇನು ವಿಶೇಷವಿಲ್ಲ ಎಂದು ತಮ್ಮ ಟಿಪಿ ಬದಲಾವಣೆ ಬಗ್ಗೆ ಸ್ಪಷ್ಟನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.