ಹುಬ್ಬಳ್ಳಿ: ಉಪನಗರ ಪೊಲೀಸ್ ಠಾಣೆಯನ್ನು ಸುಮಾರು ಐದು ವರ್ಷಗಳಿಂದ ಕಾವಲು ಕಾಯುತ್ತಿದ್ದ ಶ್ವಾನ ಅಕಾಲಿಕ ಮರಣ ಹೊಂದಿದೆ. ತಮ್ಮ ಪ್ರೀತಿಯ ಶ್ವಾನಕ್ಕೆ ಅರ್ಥಪೂರ್ಣವಾಗಿ ಅಂತ್ಯಸಂಸ್ಕಾರ ಮಾಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಉಪನಗರ ಠಾಣೆಯನ್ನು ಕಳೆದ ಐದು ವರ್ಷದಿಂದ ಜಾಕಿ ಎಂಬ ಹೆಸರಿನ ಶ್ವಾನವು ಕಾವಲು ಕಾಯುತ್ತಿತ್ತು. ಚಿಕ್ಕ ಮರಿಯಾಗಿದ್ದಾಗಿನಿಂದ ಉಪನಗರ ಠಾಣೆಯಲ್ಲಿ ಬೆಳೆದಿದ್ದ ಜಾಕಿ, ಪೊಲೀಸರೊಂದಿಗೆ ಅನ್ಯೋನ್ಯತೆಯಿಂದ ಇತ್ತು.
ಆದ್ರೆ ಶುಕ್ರವಾರ ಆರೋಗ್ಯದಲ್ಲಿ ಏರುಪೇರಾಗಿ ಜಾಕಿ ಮೃತಪಟ್ಟ ಹಿನ್ನೆಲೆಯಲ್ಲಿ ಉಪನಗರ ಠಾಣೆಯ ಪೊಲೀಸರು ತಮ್ಮ ಪ್ರೀತಿಯ ಜಾಕಿಗೆ ಗೌರವಯುತವಾಗಿ ಅಂತಿಮ ವಿದಾಯ ಹೇಳಿದ್ದಾರೆ.