ಬಳ್ಳಾರಿ : ಬಳ್ಳಾರಿ ಪಾಲಿಕೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಮೂರುವರೆ ಕೋಟಿ ಡೀಲ್ ಹಗರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಸರ್ಕಾರ ಅಭಿವೃದ್ಧಿಯತ್ತ ಗಮನ ಹರಿಸಿದೆಯೇ ಹೊರತು ಇಂತಹ ಕೀಳು ಮಟ್ಟದ ರಾಜಕೀಯ ಮಾಡುವುದಕ್ಕೆ ಅಲ್ಲ. ಕಾಂಗ್ರೆಸ್ ಮುಂದಿನ ಚುನಾವಣೆ ಸೋಲುವ ಭೀತಿಯಿಂದ ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.
ಬಳ್ಳಾರಿ ನಗರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪಾಲಿಕೆ ಸದಸ್ಯ ಆಸೀಫ್ ಅವರು ಶಾಸಕ ನಾಗೇಂದ್ರ ಅವರ ಸಂಬಂಧಿ ಎರ್ರಿಸ್ವಾಮಿ ಅವರ ವಿರುದ್ಧ ಮೇಯರ್ ಮಾಡಲು ಮೂರೂವರೆ ಕೋಟಿ ರೂ ತೆಗೆದುಕೊಂಡಿರುವ ಬಗ್ಗೆ ದೂರು ಕೊಟ್ಟಿದ್ದಾರೆ. ಹಣ ಪಡೆದವರು ಕಾಂಗ್ರೆಸ್ನವರೇ ಹಣ ಕೊಟ್ಟವರು ಕಾಂಗ್ರೆಸ್ನವರೇ ಅವರಿಬ್ಬರೂ ಒಳ ಜಗಳ ಮಾಡಿಕೊಂಡು ಅದನ್ನು ನಮ್ಮ ಮೇಲೆ ದೂರುತ್ತಿದ್ದಾರೆ. ಇದರಲ್ಲಿ ಶ್ರೀರಾಮುಲು ಅವರನ್ನು ಯಾಕೆ ಎಳೆದು ತರುತ್ತಿದ್ದಾರೆ ಎಂದರು.
ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಶ್ರೀರಾಮುಲು ಮೇಲೆ ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಶ್ರೀರಾಮುಲು ಗ್ರಾಮಾಂತರಕ್ಕೆ ಸ್ಪರ್ಧೆ ಮಾಡಬಹುದು ಎನ್ನುವ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಶ್ರೀರಾಮುಲು ಹೆಸರು ತೆಗೆದು ಕೊಳ್ಳಲು ನೈತಿಕ ಹಕ್ಕು ಕಾಂಗ್ರೆಸ್ ಇಲ್ಲ ಎಂದು ಶಾಸಕ ಸೋಮಶೇಖರ ರೆಡ್ಡಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಇದನ್ನೂ ಓದಿ: ಹು-ಧಾ ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್.. ಆದ್ರೇ, ಪ್ಲಾಬ್ರಂ ಏನ್ಪಾ ಅಂದ್ರಾ..