ETV Bharat / city

ಲಾಕ್​ಡೌನ್​ ಪಾಸ್​ ದುರ್ಬಳಕೆ ಆರೋಪ: ಧಾರವಾಡ ಜಿಲ್ಲಾಡಳಿತದ ಕಣ್ಣಿಗೆ ಮಣ್ಣೆರೆಚಿದ ಎಂಎಲ್​ಸಿ ಬಂಟ! - ಕೊರೊನಾ ಪ್ರಕರಣಗಳು

ಕೊರೊನಾ ಹಾವಳಿಗೆ ಲಾಕ್​ಡೌನ್​ ಘೋಷಿಸಿರುವ ಸರ್ಕಾರ ಅಗತ್ಯ ಸಮಯದಲ್ಲಿ ಸಂಚಾರಕ್ಕೆ ಪಾಸ್​ ನೀಡುವ ಮೂಲಕ ಜನರ ತುರ್ತು ಸಮಯಕ್ಕೆ ಸಹಕಾರಿಯಾಗಿದೆ. ಆದ್ರೆ ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಹುಬ್ಬಳ್ಳಿಯ ಕಾಂಗ್ರೆಸ್​ ಎಂಎಲ್​ಸಿ ಬಲಗೈ ಬಂಟನೊಬ್ಬ 5 ವರ್ಷಗಳ ಹಿಂದೆ ಮೃತಪಟ್ಟಿದ್ದ ತಂದೆಯ ಹೆಸರು ಹೇಳಿಕೊಂಡು ಪಾಸ್​ ಪಡೆದು ಜಿಲ್ಲಾಡಳಿತದ ಕಣ್ಣಿಗೆ ಮಣ್ಣೆರೆಚಿರುವ ಆರೋಪ ಕೇಳಿಬಂದಿದೆ.

hubballi-lock-down-pass-misuse
ಸೋಮಲಿಂಗ ಯಲಿಗಾರ್
author img

By

Published : Apr 18, 2020, 11:51 AM IST

ಹುಬ್ಬಳ್ಳಿ: ಲಾಕ್​ಡೌನ್​ ಪಾಸ್​ ಪಡೆಯಲು 5 ವರ್ಷಗಳ ಹಿಂದೆ ಮೃತಪಟ್ಟಿದ್ದ ತಂದೆಯ ಹೆಸರೇಳಿಕೊಂಡು ಕಾಂಗ್ರೆಸ್​ ಎಂಎಲ್​ಸಿ ಬಂಟನೊಬ್ಬ ಪಾಸ್​​ ಪಡೆದು ದುರ್ಬಳಕೆ ಮಾಡಿಕೊಂಡಿರುವ ಆರೋಪ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ಕಾಂಗ್ರೆಸ್​​ ಎಂಎಲ್​ಸಿ ಬಲಗೈ ಬಂಟನಾಗಿರುವ ಸೋಮಲಿಂಗ ಯಲಿಗಾರ್ ಪಾಸ್ ದುರ್ಬಳಕೆ ಮಾಡಿಕೊಂಡಿರುವ ಆರೋಪಿ. ಸೋಮಲಿಂಗ ಯಲಿಗಾರ ತಮ್ಮ ತಂದೆ ಬೆಂಗಳೂರಿನಲ್ಲಿ ಮೃತಪಟ್ಟಿರುವುದಾಗಿ ಹೇಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಧಾರವಾಡ ಜಿಲ್ಲಾಡಳಿತದಿಂದ ಪಾಸ್ ಪಡೆದಿದ್ದಾರೆ. ಆದ್ರೆ 5 ವರ್ಷದ ಹಿಂದೆಯೇ ಇವರ ತಂದೆ ಮೃತಪಟ್ಟಿದ್ದಾರೆ.

hubballi-lock-down-pass-misuse
ಜಿಲ್ಲಾಡಳಿತದ ಪಾಸ್​

ಅಲ್ಲದೇ ಪಾಸ್ ವಿತರಣೆ ವೇಳೆ ಜಿಲ್ಲಾಡಳಿತ ಬೆಂಗಳೂರಿನಿಂದ ಮರಳಿ ಬಾರದಂತೆ ಪ್ರಯಾಣಕ್ಕೆ ನಿರ್ಭಂದ ವಿಧಿಸಿ ವಿತರಣೆ ಮಾಡಿತ್ತು. ಆದ್ರೆ ಸ್ವತಃ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ಸೋಮಲಿಂಗ ಪಾಸ್ ದುರ್ಬಳಕೆ ಮಾಡಿಕೊಂಡು ಮರಳಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಮಧ್ಯೆ ಮರಳಿ ಬರುವಾಗ ದಾವಣಗೆರೆ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದ್ದು, ಅವರಿಗೂ ಸಹ ಸುಳ್ಳು ಹೇಳಿ ಚಳ್ಳೆಹಣ್ಣು ತಿನ್ನಿಸಿದ್ದಾನೆ ಎನ್ನಲಾಗ್ತಿದೆ.

ಈ ಕುರಿತು ಸೋಮಲಿಂಗ್ ಯಲಿಗಾರನನ್ನ ಪ್ರಶ್ನಿಸಿದ್ರೆ, ನಾನು ಪಾಸ್ ತಗೆದುಕೊಂಡಿದ್ದು ನಿಜ. ನಮ್ಮ ಮಾವನವರು ತೀರಿಕೊಂಡಿದ್ರು. ಹೀಗಾಗಿ ಐದು ಜನರ ಹೆಸರಿನಲ್ಲಿ ಪಾಸ್ ಪಡೆದಿದ್ದೆವು ಎನ್ನುತ್ತಾರೆ.

‌ಸದ್ಯ ಲಾಕ್ ಡೌನ್ ಮಧ್ಯೆ ರೋಡಿಗೆ ಇಳಿಯೋ ವಾಹನಗಳನ್ನ ಸೀಜ್ ಮಾಡೋ ಪೊಲೀಸರು ಪಾಸ್ ದುರ್ಬಳಕೆ ಮಾಡಿಕೊಂಡ ಪ್ರಭಾವಿ ವ್ಯಕ್ತಿಗಳಿಗೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.