ಹುಬ್ಬಳ್ಳಿ: ಒಮ್ಮೆ ಬಳಕೆ ಮಾಡಿದ ಹ್ಯಾಂಡ್ ಗ್ಲೌಸ್ಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದು, ಸಾರ್ವಜನಿಕರು ಆತಂಕಗೊಂಡಿರುವ ಘಟನೆ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.
ಕೊರೊನಾ ವೈರಸ್ ಭೀತಿ ನಡುವೆಯೂ ಬೇಜವಾಬ್ದಾರಿಯಿಂದ ಬಳಸಿದ ಹ್ಯಾಂಡ್ ಗ್ಲೌಸ್ ಅನ್ನು ಎಲ್ಲೆಂದರಲ್ಲಿ ಎಸೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಆವರಣದಲ್ಲಿ ಕಸದ ಡಬ್ಬಿಗಳಿದ್ದರೂ ಕೂಡ ರಸ್ತೆ ಮಧ್ಯದಲ್ಲಿಯೇ ಎಸೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಆರೋಗ್ಯ ಇಲಾಖೆ ಸಿಬ್ಬಂದಿ ಇಂತಹ ಅವ್ಯವಸ್ಥೆ ಸೃಷ್ಠಿಸಬಾರದು ಎಂಬುದು ಸಾರ್ವಜನಿಕರ ಆಗ್ರಹ.