ETV Bharat / city

ಬಿಜೆಪಿ ವಿರುದ್ಧ ಅಹಾರ ಧಾನ್ಯಗಳಿರುವ ‌ಕಿಟ್​​ಗಳ ದುರುಪಯೋಗ​ ಆರೋಪ

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ನೀಡಿರುವ ಕಿಟ್​ಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಆರೋಪ ಹುಬ್ಬಳ್ಳಿಯಲ್ಲಿ ಕೇಳಿಬಂದಿದೆ.

ಅಹಾರ ಧಾನ್ಯಗಳ ‌ಕಿಟ್ ವಿತರಣೆ
ಅಹಾರ ಧಾನ್ಯಗಳ ‌ಕಿಟ್ ವಿತರಣೆ
author img

By

Published : Apr 17, 2020, 3:25 PM IST

ಹುಬ್ಬಳ್ಳಿ: ಅಹಾರ ಧಾನ್ಯಗಳ ‌ಕಿಟ್​​ಗಳು ಬಿಜೆಪಿಯಿಂದ ದುರ್ಬಳಕೆ ಆಗುತ್ತಿವೆ ಎನ್ನುವ ಆರೋಪ‌ ಕೇಳಿ ಬಂದಿದೆ.

ಅಹಾರ ಧಾನ್ಯಗಳ ‌ಕಿಟ್ ವಿತರಣೆ
ಅಹಾರ ಧಾನ್ಯಗಳ ‌ಕಿಟ್ ವಿತರಣೆ

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ನೀಡಿದ ಕಿಟ್​ಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ.‌ ಬಡವರು,‌ ನಿರ್ಗತಿಕರಿಗೆ ನೀಡಲು ಸುಧಾ ಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್​ನಿಂದ ಆಹಾರ ಸಾಮಗ್ರಿಗಳ ಕಿಟ್​​ಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಈ ಕಿಟ್​ಗಳು ದುರ್ಬಳಕೆಯಾಗುತ್ತಿವೆ. ಆಹಾರ ಧಾನ್ಯಗಳ ಕಿಟ್​ಗಳನ್ನು ನಾವೇ ಕೊಡುತ್ತಿದ್ದೇವೆ ಎಂದು ಬಿಜೆಪಿ ಪೋಸ್‌ ಕೊಡುತ್ತಿದೆ. ಕಿಟ್​ಗಳ ಮೇಲೆ ಸುಧಾಮೂರ್ತಿ ಅಂತ ಹೆಸರು ಇದ್ರೂ ತಾವೇ ಕೊಟ್ಟಿರೋದಾಗಿ ಫೇಸ್​ಬುಕ್ ಪೋಸ್ಟ್​ಗಳಲ್ಲಿ ಬಿಜೆಪಿ ಮುಖಂಡ ಪ್ರಭು ನವಲಗುಂದಮಠ ಹಾಕಿಕೊಂಡಿದ್ದಾರೆ.

ಅಹಾರ ಧಾನ್ಯಗಳ ‌ಕಿಟ್ ವಿತರಣೆ
ಅಹಾರ ಧಾನ್ಯಗಳ ‌ಕಿಟ್ ವಿತರಣೆ

ಇನ್ನು ಜಿಲ್ಲಾಡಳಿತಕ್ಕೆ ದಾನಿಗಳು ನೀಡಿದ್ದ ಕಿಟ್​ಗಳು ಬಿಜೆಪಿ ಮುಖಂಡರ ಕೈಗೆ ಸಿಕ್ಕಿದ್ದು ಹೇಗೆ?, ದಾನಿಗಳು ನೀಡಿದ್ದ ಆಹಾರದ ಕಿಟ್​ಗಳನ್ನ ಹಂಚಿ ಬಿಜೆಪಿ ಪ್ರಚಾರ‌ ಪಡೆಯುತ್ತಿದ್ದೇಯಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಜಿಲ್ಲಾಡಳಿತ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ‌ಒತ್ತಾಯಿಸಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.