ಹುಬ್ಬಳ್ಳಿ: ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನಕ್ಕೆ ಉದ್ಯಮಿ ವಿಜಯ ಸಂಕೇಶ್ವರ್ ಅವರು ಸಂತಾಪ ಸೂಚಿಸಿದ್ದಾರೆ.
ಅರುಣ್ ಜೇಟ್ಲಿ ಅವರು ಚಾಣಕ್ಯರು ಮತ್ತು ಅತಿಯಾಗಿ ಕಾನೂನು ಬಲ್ಲವರಾಗಿದ್ದರು. ವಿತ್ತ ಸಚಿವರಾಗಿದ್ದಾಗ ಭಾರತದ ಆರ್ಥಿಕ ವ್ಯವಸ್ಥೆಗೆ ಅವರ ಕೊಡುಗೆ ಅಪಾರ. ಅವರ ಅಗಲಿಕೆ ಬಹಳಷ್ಟು ದುಃಖ ತಂದಿದೆ ಎಂದು ವಿಜಯ ಸಂಕೇಶ್ವರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೇಟ್ಲಿ ಅವರ ವಾಕ್ಚಾತುರ್ಯ ಅದ್ಭುತ. ಸರಳ ಗುಣ ಉಳ್ಳವರು. ನಾನು ಲೋಕಸಭಾ ಸದಸ್ಯರಾಗಿದ್ದಾಗ ಅವರು ಕಾನೂನು ಸಚಿವರಾಗಿದ್ದರು. ವಿತ್ತ ಸಚಿವರಾಗಿದ್ದಾಗ ಜಿಎಸ್ಟಿ ಯೋಜನೆ ಜಾರಿ ತರಲು ಹೆಚ್ಚು ಅಧ್ಯಯನ ನಡೆಸಿದ್ದರು. ನೋಟು ಅಮಾನ್ಯೀಕರಣಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದರು. ಜೇಟ್ಲಿ ಅಗಲಿಕೆಯಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.