ಹುಬ್ಬಳ್ಳಿ: ಗೋಕುಲ ರಸ್ತೆ ಕೆ.ಎಸ್.ಶರ್ಮಾ ಆವರಣದಲ್ಲಿರುವ ಸಂಜೀವಿನಿ ಕೋವಿಡ್ ಕೇರ್ ಸೆಂಟರ್ಗೆ ಕೊನೆಗೂ ಸ್ವಚ್ಛತಾ ಭಾಗ್ಯ ದೊರೆತಿದೆ. ಈ ಸೆಂಟರ್ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಸೋಂಕಿತರು ಅಲ್ಲಿನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಟಿವಿ ಭಾರತದಲ್ಲಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತ್ತು.
ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಂಜೀವಿನಿ ಕೇರ್ ಸೆಂಟರ್ನ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ. ಶೌಚಾಲಯ ಹಾಗೂ ಸ್ನಾನಗೃಹಗಳು ಗಬ್ಬೆದ್ದು ನಾರುತ್ತಿದ್ದು, ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಕಸ ಗುಡಿಸುತ್ತಾರೆ, ಶೌಚಾಲಯ ಸ್ವಚ್ಛ ಮಾಡಿ ವಾರಗಳೇ ಕಳೆದಿವೆ ಎಂದು ಸೋಂಕಿತರು ದೂರಿದ್ದರು.