ಹುಬ್ಬಳ್ಳಿ: ದೀಪಾವಳಿ ಹಬ್ಬದಂದು ವಿಶೇಷ ಪೂಜೆ, ದೀಪ ಬೆಳಗಿಸುವುದು, ಪಟಾಕಿ ಸಿಡಿಸಿ ಸಂಭ್ರಮಿಸುವುದು ಸಾಮಾನ್ಯ. ಇಲ್ಲೊಂದು ಕುಟುಂಬವು ಮತ್ತೊಬ್ಬರ ಮನದ ದೀಪ ಬೆಳಗಿಸಿ ಅವರನ್ನು ಖುಷಿ ಪಡಿಸುವ ಮೂಲಕ ಮಾದರಿ ಆಗಿದ್ದಾರೆ.
ಹೌದು, ಹುಬ್ಬಳ್ಳಿ ನವನಗರದ ಮೈತ್ರಿ ಅಸೋಸಿಯೇಷನ್ ವೃದ್ಧಾಶ್ರಮದ ಅದೆಷ್ಟೋ ಹಿರಿಯ ಜೀವಗಳಿಗೆ ತನ್ನ ದುಡಿಮೆಯಲ್ಲೇ ಸಹಾಯಹಸ್ತ ಚಾಚುವ ಸಮಾಜ ಸೇವಕ ಮಂಜುನಾಥ ಎಂಟ್ರೂವಿ ಈ ಬಾರಿ ಹೊಸ ಬಟ್ಟೆ, ಸೀರೆ ಹಾಗೂ ಸಿಹಿ ವಿತರಿಸಿ ದೀಪಾವಳಿಯನ್ನು ಆಚರಿಸಿದ್ದಾರೆ. ಪರೋಪಕಾರದ ಮೂಲಕ ವೃದ್ಧಾಶ್ರಮದಲ್ಲಿ ಆನಂದದ ಜ್ಯೋತಿ ಬೆಳಗಿಸಿದ್ದಾರೆ.
ಇದನ್ನೂ ಓದಿ: ಹೊಂಡೆಕಾಯಿ ಹೊಡೆದಾಟ: ಬೆಳಕಿನ ಹಬ್ಬದಂದು ಅಂಕೋಲಾದಲ್ಲೊಂದು ವಿಭಿನ್ನ ಆಚರಣೆ
ಹಬ್ಬದ ಸಂಭ್ರಮವನ್ನು ತಮ್ಮ ತಮ್ಮ ಮನೆಗಳಲ್ಲಿ ಆಚರಿಸುವ ಬದಲಾಗಿ ಮತ್ತೊಬ್ಬರಿಗೆ ನೆರವಾಗಿ ಜ್ಯೋತಿ ಬೆಳಗಿಸಿದ ಇವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.