ಧಾರವಾಡ: ರೈತರ ಕಬ್ಬಿನ ಬಾಕಿ ಹಣ ಉಳಿಸಿಕೊಂಡ ರಾಜಕಾರಣಿಗಳಿಗೆ ವೋಟು ಹಾಕಬೇಡಿ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕರೆ ನೀಡಿದರು.
ಧಾರವಾಡದಲ್ಲಿ ಜಿಲ್ಲಾವಾರು ರೈತರ ಸಮಾವೇಶ ನಡೆಸಿ ಮಾತನಾಡಿದ ಅವರು, ಯಾವುದೇ ಪಕ್ಷದವರಾಗಿರಲಿ, ರೈತರ ಹಣ ಬಾಕಿ ಇಟ್ಟುಕೊಂಡವರಿಗೆ ಮತ ಹಾಕಬೇಡಿ. ಬಾಕಿ ಉಳಿಸಿಕೊಂಡಿರುವ ರೈತರ ಹಣ ಹಿಂತಿರುಗಿಸಲಿ. ಈ ಮೂಲಕ ರೈತರು ರಾಜಕಾರಣಿಗಳಿಗೆ ಸರಿಯಾದ ಉತ್ತರ ಕೊಡಬೇಕು ಎಂದು ಮನವಿ ಮಾಡಿದರು.