ETV Bharat / city

ಧಾರವಾಡದಲ್ಲಿ ಕಟ್ಟಡ ಕುಸಿತ ಪ್ರಕರಣ... ಇನ್ನೂ 20 ಜನ ಸಿಲುಕಿರುವ ಶಂಕೆ... ಸಾವಿನ ಸಂಖ್ಯೆ 3ಕ್ಕೆ ಏರಿಕೆ - ರಕ್ಷಣಾ ಕಾರ್ಯ

ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿಯಿಡೀ ರಕ್ಷಣಾ ಕಾರ್ಯ ಮುಂದುವರಿದಿದ್ದು, ಪಿಲ್ಲರ್ ಕೆಳಗೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಇದೇ ವೇಳೆ ಪಿಲ್ಲರ್​ ನಡುವೆ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಎನ್​ಡಿಆರ್​ಎಫ್​ ತಂಡ ರಕ್ಷಣೆ ಮಾಡಿದೆ. ಸದ್ಯ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದೆ.

ಧಾರವಾಡದಲ್ಲಿ ಕಟ್ಟಡ ಕುಸಿತ
author img

By

Published : Mar 20, 2019, 10:36 AM IST

Updated : Mar 20, 2019, 1:11 PM IST

ಧಾರವಾಡ: ಇಲ್ಲಿನ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಸಾವನ್ನಪ್ಪಿದವರ ಸಂಖ್ಯೆ ನಾಲ್ಕಕ್ಕೇರಿದ್ದು, ಇದುವರೆಗೂ ಸುಮಾರು 56 ಜನರನ್ನು ರಕ್ಷಣೆ ಮಾಡಲಾಗಿದೆ.

ದುರಂತದಲ್ಲಿ ಸತ್ತಿರುವ ನಾಲ್ವರಲ್ಲಿ ಮೂವರ ಗುರುತು ಪತ್ತೆಯಾಗಿದೆ. ಧಾರವಾಡ ಪಾರ್ವತಿ ನಗರದ ಆಶಿತ್ ಮಹೇಶ್ವರಯ್ಯ ಹಿರೇಮಠ್ (32), ಹುಬ್ಬಳ್ಳಿಯ ಆನಂದ ನಗರದ ಸಲೀಂ ಮಂಕದಾರ್ (40) ಹಾಗೂ ಮೆಹಬೂಬ್ ದೇಸಾಯಿ (40) ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಅಪರಿಚಿತ ಮಹಿಳೆಯ ಶವ ಜಿಲ್ಲಾಸ್ಪತ್ರೆಗೆ ರವಾನೆಯಾಗಿದೆ.

Dharwad building collapse
ಧಾರವಾಡದಲ್ಲಿ ಕಟ್ಟಡ ಕುಸಿತ

ರಾತ್ರಿಯಿಡೀ ರಕ್ಷಣಾ ಕಾರ್ಯ ಮುಂದುವರಿದಿದ್ದು, ಆದರೂ ಪಿಲ್ಲರ್ ಕೆಳಗೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಇದೇ ವೇಳೆ ಪಿಲ್ಲರ್​ ನಡುವೆ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಎನ್​ಡಿಆರ್​ಎಫ್​ ತಂಡ ರಕ್ಷಣೆ ಮಾಡಿದೆ. ಇದುವರೆಗೆ ಸುಮಾರು 56 ಜನರನ್ನು ರಕ್ಷಣೆ ಮಾಡಲಾಗಿದ್ದು, ಗಾಯಗೊಂಡ ಸುಮಾರು 46 ಜನರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಸುಗಮಗೊಳಿಸಲು ಘಾಜಿಯಾಬಾದ್​ನಿಂದ ಮತ್ತೆ 78 ಜನರಿರುವ ರಕ್ಷಣಾ ತಂಡ ಧಾರವಾಡ ತಲುಪಿದೆ.

ಇನ್ನು ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದವರಿಗೆ ರಕ್ಷಣಾ ತಂಡವು ಪೈಪ್ ಮೂಲಕ ನೀರು ಮತ್ತು ಗ್ಲುಕೋಸ್ ನೀಡುತ್ತಿದೆ. ಅವಶೇಷದಡಿಯಲ್ಲಿ ಸಿಲುಕಿದ ನಾಗರಾಜ ಎಂಬಾತನಿಗೆ ಪೈಪ್ ಮೂಲಕ ನೀರು ಮತ್ತು ಗ್ಲುಕೋಸ್ ರವಾನಿಸಿದ್ದಾರೆ.

Dharwad building collapse
ಧಾರವಾಡದಲ್ಲಿ ಕಟ್ಟಡ ಕುಸಿತ

ಇನ್ನೂ ಇಪ್ಪತ್ತು ಜನ ಅವಶೇಷಗಳಡಿ ಇರುವ ಶಂಕೆ...

ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಇನ್ನೂ ಸುಮಾರು ಇಪ್ಪತ್ತು ಜನರಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಂತ್ರಜ್ಞಾನವನ್ನಾಧರಿಸಿ ರಕ್ಷಣಾ ಕಾರ್ಯ ಆರಂಭಿಸಲು ಯೋಜನೆ ಹಾಕಿಕೊಂಡ ಎನ್​ಡಿಆರ್​ಎಫ್ ತಂಡ, ಸ್ಯಾಟಲೈಟ್ ಆಧರಿಸಿ ಜನರ ಇರುವಿಕೆಯನ್ನು ಪತ್ತೆ ಹಚ್ಚುತ್ತಿದೆ.

building
ಕುಸಿದ ಕಟ್ಟಡ

ಮಾನವೀಯತೆ ಮೆರೆದ ಸ್ಥಳೀಯರು...

ಇನ್ನು ಇಂತಹ ಸನ್ನಿವೇಶದಲ್ಲೂ ರಕ್ಷಣಾ ಕಾರ್ಯದಲ್ಲಿ ರಕ್ಷಣಾ ಸಿಬ್ಬಂದಿಗೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಸಾಥ್​ ನೀಡುತ್ತಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ಉಪಹಾರದ ವ್ಯವಸ್ಥೆಯನ್ನು ಸಾರ್ವಜನಿಕರೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿದ್ದಾರೆ. ನೀರು, ಚಹಾ, ಬಿಸ್ಕೆಟ್ ಸೇರಿದಂತೆ ಉಚಿತವಾಗಿ ಉಪಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

ಮಾಲೀಕರ ವಿರುದ್ಧ ದೂರು ...

blue print
ನೀಲಿ‌ ನಕ್ಷೆ ವೀಕ್ಷಣೆ

ಇನ್ನು ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಗಂಗಣ್ಣ ಶಿಂತ್ರೆ, ರವಿ ಸೊರಬದ, ಮಹಾಬಳೇಶ್ವರ್, ಬಸವರಾಜ್ ನಿಗದಿ, ರಾಜು ಘಾಟಿನ್ ಹಾಗೂ ಎಂಜಿನಿಯರ್ ವಿವೇಕ ಪವಾರ ಎಂಬ ಆರು ಜನರ ವಿರುದ್ಧ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಅನಿಶೆಟ್ಟರ್ ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ತುಷಾರ್​​ ಗಿರಿನಾಥ್​, ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿರೋ ಮಾಹಿತಿ ಇದೆ. ಕಟ್ಟಡಕ್ಕೆ ಅನುಮತಿ ನೀಡುವಲ್ಲಿ ಅಧಿಕಾರಿಗಳ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ತಕ್ಷಣಕ್ಕೆ ಮಾನವೀಯತೆ ಆಧಾರದಲ್ಲಿ ಮೃತರ ಕುಟುಂಬಗಳಿಗೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ.ಗಾಯಾಳುಗಳಿಗೆ ಬೇಕಾದ ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಈಗಾಗಲೇ ಕಟ್ಟಡದ ಮಾಲೀಕರ ಮೇಲೆ ದೂರು ದಾಖಲಾಗಿದೆ. ತನಿಖೆ ನಂತರ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.ಎಷ್ಟೇ ಪ್ರಭಾವಿ ಇದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಯಾರೂ ಕಾನೂನು ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ದುರಂತಕ್ಕೆ ಕಾರಣರಾದ ಕಟ್ಟಡ ಮಾಲೀಕರಿಂದ ಮೃತರು ಮತ್ತು ಗಾಯಾಳುಗಳಿಗೆ ಬೇಕಾದ ಅಗತ್ಯ ಹಣ ವಸೂಲಿ ಮಾಡುತ್ತೇವೆ ಎಂದಿದ್ದಾರೆ.

ಸುರಂಗ ಮಾರ್ಗ

ಈಗಾಗಲೇ ಕಟ್ಟಡದ ನೀಲಿ ನಕ್ಷೆ ತರಿಸಿಕೊಂಡಿರುವ ಅಧಿಕಾರಿಗಳು,ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್​ಡಿಆರ್​ಎಫ್ ಮುಖ್ಯಸ್ಥರಿಗೆ ನೀಲಿ‌ ನಕ್ಷೆ ಕೊಟ್ಟಿದ್ದಾರೆ. ನೀಲಿ ನಕ್ಷೆ ವೀಕ್ಷಿಸಿ ಎನ್​ಡಿಆರ್​ಎಫ್ ಅಧಿಕಾರಿಗಳು ಮುಂದಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಿಲುಕಿರುವ ಜನರನ್ನ ಹೊರ ತೆಗೆಯಲು ಸುರಂಗ ಮಾರ್ಗ ಕೊರೆಯಲಾಗಿದೆ. ಎನ್​ಡಿಆರ್​ಎಫ್ ತಂಡ ಸುರಂಗ ಮಾರ್ಗದಲ್ಲಿ ಹೋಗಿ‌ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಡಿಐಜಿ ಎಂ.ಎನ್.ರೆಡ್ಡಿ ಹಾಗೂ ರವಿಕಾಂತೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Intro:Body:

stringer dharwada

[3/20, 6:02 ಂಒ] +91 81059 69684: ಧಾರವಾಡ

ಕಟ್ಟಡದ ಅವಶಷೇಕಗಳಡಿಯಲ್ಲಿ ಸಿಲುಕಿದವರಿಗೆ ಪೈಪ್ ಮೂಲಕ ನೀರು ಮತ್ತು ಗುಲ್ಕೋಸ್ ನಿಡಿದ ತಕ್ಷಣಾ ತಂಡ.

ಅವಶೇಷದಡಿಯಲ್ಲಿ ಸಿಲುಕಿದ ನಾಗರಾಜ ಎಂಬಾತನಿಗೆ ಪೈಪ್ ಮೂಲಕ ನೀರು ಮತ್ತು ಗುಲ್ಕೋಸ್ ರವಾನೆ.

[3/20, 6:15 ಂಒ] +91 77955 00805: ೩೭ ಜನರ ಓಆಖಈ ತಂಡದಿಂದ ಮುಂದುವರೆದ ರಕ್ಷಣಾ  ಕಾರ್ಯಾಚರಣೆ..

ಇಲ್ಲಿಯವರೆಗೂ ೫೦ ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿರುವ ಜಿಲ್ಲಾಡಳಿತ..

[3/20, 6:21 ಂಒ] +91 81059 69684: ಧಾರವಾಡ

ಕಟ್ಟಡದ ಅವಶಷೇಕಗಳಡಿಯಲ್ಲಿ ಸಿಲುಕಿದವರಿಗೆ ಪೈಪ್ ಮೂಲಕ ನೀರು ಮತ್ತು ಗುಲ್ಕೋಸ್ ನಿಡಿದ ತಕ್ಷಣಾ ತಂಡ.

ಅವಶೇಷದಡಿಯಲ್ಲಿ ಸಿಲುಕಿದ ನಾಗರಾಜ ಎಂಬಾತನಿಗೆ ಪೈಪ್ ಮೂಲಕ ನೀರು ಮತ್ತು ಗುಲ್ಕೋಸ್ ರವಾನೆ.

[3/20, 6:21 ಂಒ] +91 81059 69684: ಧಾರವಾಡ

ನಾಲ್ಕು ಅಂತಸ್ತಿನ ಕಟ್ಟಡ ಕುಸಿತ ಹಿನ್ನೆಲೆ

ರಾತ್ರಿಯಿಡೀ ಮುಂದುವರೆದ ರಕ್ಷಣಾ ಕಾರ್ಯಾಚರಣೆ

ನಗರದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಕಟ್ಟಡ ಕುಸಿತ

ರಕ್ಷಣಾ ಸಿಬ್ಬಂಧಿ ಜೊತೆ ಸ್ವಯಂ ಪ್ರೇರಿತವಾಗಿ ಸಾಥ್ ನೀಡುತ್ತಿರುವ ಸಾರ್ವಜನಿಕರು

ಘಟನೆ ಹಿನ್ನೆಲೆ ಮಾನವೀಯತೆ ಮೆರೆದ ಸ್ಥಳೀಯ ಸಾರ್ವಜನಿಕರು

ರಾತ್ರಿಯಿಡೀ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ಉಪಹಾರದ ವ್ಯವಸ್ಥೆ ಮಾಡಿದ ಸಾರ್ವಜನಿಕರು

ಮಾನವೀಯವಾಗಿ ಉಚಿತ ಉಪಹಾರ ಒದಗಿಸಿದ ಸಾರ್ವಜನಿಕರು

ಸ್ವಂತ ಖರ್ಚಿನಲ್ಲಿ ಸ್ವಯಂಪ್ರೇರಿತವಾಗಿ ಉಪಹಾರದ ವ್ಯವಸ್ಥೆ

ನೀರು, ಚಹಾ, ಬಿಸ್ಕೆಟ್, ಸೇರಿದಂತೆ ಉಚಿತವಾಗಿ ಉಪಹಾರ ಒದಗಿಸಿದ ಜನಸಾಮಾನ್ಯರು

ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಉಚಿತ ಉಪಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಸಾರ್ವಜನಿಕರು

[3/20, 6:21 ಂಒ] +91 81059 69684: ಧಾರವಾಡ 

ಕಟ್ಟಡ ಕುಸಿದ ಪ್ರಕರಣ

ಸಾವಿನ ಸಂಖ್ಯೇ ಮೂರಕ್ಕೆ ಏರಿಕೆ.

ಪಿಲ್ಲರ್ ಕೆಳಗೆ ಸಿಲುಕಿ ಯುವಕ ಸಾವು ಇಬ್ಬರ ರಕ್ಷಣೆ

ಇಬ್ಬರು ಯುವಕರನ್ನು ರಕ್ಷಣೆ ಮಾಡಿದ ಎನ್ ಡಿ ಆರ್ ಎಪ್ ತಂಡ

[3/20, 6:21 ಂಒ] +91 81059 69684: *ಧಾರವಾಡ*

ಕಟ್ಟಡ ಕುಸಿತ ಪ್ರಕರಣ

ಸೆಟ್‌ಲೈಟ್ ಆಧರಿಸಿ ಜನರ ಇರುವಿಕೆ ಪತ್ತೆ ಹಚ್ಚುತ್ತಿರುವ ಎನ್.ಡಿ.ಆರ್.ಎಫ್ ಟೀಮ್

ತಂತ್ರಜ್ಞಾನ ಆಧರಿಸಿ ರಕ್ಷಣಾ ಕಾರ್ಯ ಆರಂಭಿಸಲು ಯೋಜನೆ ಹಾಕಿಕೊಂಡ ಎನ್.ಡಿ.ಆರ್.ಎಫ್

ಒಳಗಡೆ ಇನ್ನೂ ಇಪ್ಪತ್ತು ಜನರಿರುವ ಶಂಕೆ ವ್ಯಕ್ತಪಡಿಸಿದ ಟೀಮ್

[3/20, 6:47 ಂಒ] +91 81059 69684: ಧಾರವಾಡ

ಕಾರ್ಯಾಚರಣೆಗೆ ಅಡೆತಡೆ ಹಿನ್ನೆಲೆ ವಿದ್ಯುತ್ ಪ್ಲಗ್ ಗಾಗಿ ಮನವಿ

ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ಎನ್ ಡಿ ಆರ್ ಎಪ್ ತಂಡ

ಉದ್ದ ವಾಯರ್ ಉಳ್ಳ ವಿದ್ಯುತ್ ಪ್ಲಗ್ ಗಳ ಅವಶ್ಯ, ವಿದ್ಯುತ್ ಪ್ಲಗ್ ಉಳ್ಳವರು ಒದಗಿಸುವಂತೆ ಮನವಿ ಮಾಡುತ್ತಿರುವ ರಕ್ಷಣಾ ಸಿಬ್ಬಂದಿ

ವಿದ್ಯುತ್ ಉಪಕರಣ ಬಳಸಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಿರುವ ರಕ್ಷಣಾ ಸಿಬ್ಬಂದಿ

ವಿದ್ಯುತ್ ಪ್ಲಗ್ ಗಳನ್ನು ಒದಗಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿರುವ ರಕ್ಷಣಾ ಸಿಬ್ಬಂದಿ

ಬೆಳಗಿನ ಜಾವ ಮಾರುಕಟ್ಟೆ ಆರಂಭವಾಗದ ಹಿನ್ನೆಲೆ. ಸಾರ್ವಜನಿಕರಲ್ಲಿ ಮನವಿ ಮಾಡಿದ ಸಿಬ್ಬಂದಿ.

[3/20, 6:47 ಂಒ] +91 81059 69684: ಘಾಜಿಯಾಬಾದ್ ಓಆಖಈ ನ ಮತ್ತೊಂದು  78 ಜನ ರಕ್ಷಣಾ ತಂಡ ಧಾರವಾಡ ತಲುಪಿದೆ.

ಘಟನಾ ಸ್ಥಳದಲ್ಲಿ ಅವರಿಂದಲೂ ಮುಂದುವರೆಯಲಿರುವ ಕಾರ್ಯಾಚರಣೆ

[3/20, 7:05 ಂಒ] +91 77955 00805: ಧಾರವಾಡ ಕಟ್ಟಡ ಕುಸಿತ ಪ್ರಕರಣ

ಮಾಲೀಕರ ವಿರುದ್ದ ದೂರು ದಾಖಲು

ಗಂಗಣ್ಣ ಶಿಂತ್ರೆ, ರವಿ ಸೊರಬದ, ಮಹಾಬಳೇಶ್ವರ್, ಬಸವರಾಜ್ ನಿಗದಿ, ರಾಜು ಘಾಟಿನ್ ಹಾಗೂ ಇಂಜಿನೀಯರ್ ವಿವೇಕ ಪವಾರ ಎಂಬ ಆರು ಜನರ ವಿರುದ್ದ 

ದೂರು ದಾಖಲು 

ಪಾಲಿಕೆ ಸಹಾಯಕ ಆಯುಕ್ತ 

ಸಂತೋಷ ಅನಿಶೆಟ್ಟರ್ ಅವರಿಂದ ದೂರು

ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲು

ಇದುವರೆಗೆ 56 ಜನರ ರಕ್ಷಣೆ

[3/20, 7:18 ಂಒ] +91 81059 69684: ಚಿಕಿತ್ಸೆ ಗೆ ಒಟ್ಟು 7 ಜನ ಕಿಮ್ಸ್ ಹಾಗೂ 6 ಜನರನ್ನು ಎಸ್ ಡಿ ಎಂ ಗೆ ರವಾನೆ

[3/20, 7:18 ಂಒ] +91 77955 00805: ಚಿಕಿತ್ಸೆ ಗೆ ಒಟ್ಟು 7 ಜನ ಕಿಮ್ಸ್ ಹಾಗೂ 6 ಜನರನ್ನು ಎಸ್ ಡಿ ಎಂ ಗೆ ರವಾನೆ

[3/20, 7:18 ಂಒ] +91 81059 69684: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಗಿರಿಧರ ಕುಕನೂರ ಅವರಿಂದ ಮಾಹಿತಿ

[3/20, 7:18 ಂಒ] +91 81059 69684: 46 ಜನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು

[3/20, 7:18 ಂಒ] +91 77955 00805: ಖಿoಣಚಿಟ 59 ಡಿesಛಿueಜ

Conclusion:
Last Updated : Mar 20, 2019, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.