ಧಾರವಾಡ : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯನ್ನು ಭೇಟಿ ಮಾಡಲು ನಿರಾಕರಿಸಿದ ಆರೋಪದ ಹಿನ್ನೆಲೆ ಡಿಮ್ಹಾನ್ಸ್ ಆಸ್ಪತ್ರೆ ವೈದ್ಯನ ವಿರುದ್ಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಡಿಮ್ಹಾನ್ಸ್ ಆಸ್ಪತ್ರೆ ವೈದ್ಯ ರಾಘವೇಂದ್ರ ನಾಯಕ ಎಂಬುವರ ವಿರುದ್ಧ ಬೆಂಗಳೂರು ಮೂಲದ ಸುಧಾ ಕಾಟ್ವಾ ಎನ್ನುವರು ದೂರು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿ ಮಾಡಲು ಸುಧಾ ಕಾಟ್ವಾ ಮತ್ತು ಇನ್ನೋರ್ವರು ಬಂದಿದ್ದರು. ಈ ವೇಳೆ ವೈದ್ಯ, ರೋಗಿಯ ಭೇಟಿಗೆ ಅವಕಾಶ ನೀಡದೆ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.