ಹುಬ್ಬಳ್ಳಿ: ಬಿಜೆಪಿಯವರು ರಸ್ತೆಯಲ್ಲಿ ಹೊಡೆದಾಡಿ ಲೀಡರ್ ಆಗತ್ತಾರೆ. ಆದ್ರೆ, ಅದೇ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಸೇರಿ ರೂಮ್ ಒಳಗಡೆ ಹೋದರೆ ಒಬ್ಬ ಲೀಡರ್ ಹುಟ್ಟುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಗೋಕುಲ ಗಾರ್ಡನ್ನಲ್ಲಿ ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲೆಯ ವತಿಯಿಂದ ನಡೆದ 'ಜನಸೇವಕ ಸಮಾವೇಶ'ದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಗಾಂಧಿ ಕುಟುಂಬವನ್ನು ಟೀಕಿಸುವ ಭರದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಓದಿ-ನಮ್ಮದು ಆರ್ಎಸ್ಎಸ್ ಹಿನ್ನೆಲೆಯ ಕುಟುಂಬ: ಸಚಿವ ರಮೇಶ್ ಜಾರಕಿಹೊಳಿ
ಈ ಹಿಂದೆ ಪ್ರಿಯಾಂಕಾ ಗಾಂಧಿಗೆ ಗಂಡು ಮಗು ಹುಟ್ಟಿದಾಗ ಲೀಡರ್ ಹುಟ್ಟಿದ್ದಾನೆಂದು ಹೇಳಿ ಕಾಂಗ್ರೆಸ್ನವರು ಸ್ವೀಟ್ ಹಂಚಿದ್ದರು. ರಾಹುಲ್ ಗಾಂಧಿಯವರ ಜೀವನಕ್ಕೆ ಒಂದು ಪ್ಲ್ಯಾನ್ ಇಲ್ಲ.
ಅವರು ಲಾಕ್‌ಡೌನ್ ಅನ್ ಪ್ಲ್ಯಾನ್ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡಿ ದೇಶ ಬಿಟ್ಟು ಹೊರ ದೇಶಕ್ಕೆ ಓಡಿ ಹೋಗಿದ್ದರು ಎಂದಿರುವ ಜೋಶಿ, ರಾಹುಲ್ ಗಾಂಧಿ ಹೋಗಿದ್ದು ಅವರ ಪೂರ್ವಜನರನ್ನು ನೋಡಲಿಕ್ಕೆ ಎಂದು ಟೀಕಿಸಿದರು.