ETV Bharat / city

‘ತೈಲ ಬೆಲೆ ಏರಿಕೆಯಿಂದ ಬಂಕ್ ಮಾಲೀಕರಿಗೆ ಎದುರಾಗಲಿದೆ ಮತ್ತೊಂದು ಸಮಸ್ಯೆ?

ಇತ್ತೀಚೆಗೆ ಆರಂಭವಾದ ಆಟೋ ಮಷಿನ್​ ಬಂಕ್​ಗಳಲ್ಲಿ ಮಾತ್ರ ಆಟೋಮೆಟಿಕ್ ನಂಬರ್ ಬರುತ್ತದೆ. ಆದರೆ, ಹಳೆಯ ಬಂಕ್​ಗಳಲ್ಲಿ 'ತ್ರಿ' ಡಿಜಿಟ್ ನಮೂದಾಗುತ್ತಿಲ್ಲ. ಅದನ್ನು ಮೂರಂಕಿ ಮಾಡಲು ಹೊರಟರೇ ಝಿರೋ ಆಗುತ್ತಿದೆ. ಒಂದೊಮ್ಮೆ ತೈಲ ಬೆಲೆ 100ರ ಗಡಿ ದಾಟಿದ್ರೆ, ದೇಶದ 40ರಷ್ಟು ಹಳೆಯ ಬಂಕ್​ ಮಾಲೀಕರಿಗೆ ಈ ಸಮಸ್ಯೆ ಎದುರಾಗಲಿದೆ.

Bunk owners have a problem with Fuel price rises
ತೈಲ ಬೆಲೆ ಏರಿಕೆಯಿಂದ ಬಂಕ್ ಮಾಲೀಕರಿಗೆ ಎದುರಾಗಲಿದೆ ಮತ್ತೊಂದು ಸಮಸ್ಯೆ
author img

By

Published : Mar 3, 2021, 9:14 AM IST

ಹುಬ್ಬಳ್ಳಿ: ದಿನೇ-ದಿನೆ ಏರುತ್ತಿರುವ ಇಂಧನ ಬೆಲೆ ಇದೀಗ ಪ್ರತೀ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ. ಇದರಿಂದಾಗಿ ಜನಸಾಮಾನ್ಯರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇತ್ತ ಪೆಟ್ರೋಲ್ ಬಂಕ್​​ಗಳಿಗೂ ಬೆಲೆ ಏರಿಕೆಯಿಂದ ಮೊತ್ತೊಂದು ಸಮಸ್ಯೆ ಸೃಷ್ಟಿಯಾಗಿದೆ.

ತೈಲ ಬೆಲೆ ಏರಿಕೆಯಿಂದ ಬಂಕ್ ಮಾಲೀಕರಿಗೆ ಎದುರಾಗಲಿದೆ ಮತ್ತೊಂದು ಸಮಸ್ಯೆ

ಪೆಟ್ರೋಲ್​ - ಡಿಸೇಲ್ ಬೆಲೆ ಶತಕದ ಗಡಿಯತ್ತ ಬಂದು ನಿಂತಿದೆ. ಇದು ಪೆಟ್ರೋಲ್ ಬಂಕ್ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಈವರೆಗೆ ಬಂಕ್​​ಗಳಲ್ಲಿ 99.99 ರೂಪಾಯಿಯ ಡಬಲ್ ಡಿಜಿಟ್ ನಂಬರ್ ಮಾತ್ರ ಇತ್ತು. ಇತ್ತೀಚೆಗೆ ಆರಂಭವಾದ ಆಟೋ ಮಷಿನ್​ ಬಂಕ್​ಗಳಲ್ಲಿ ಮಾತ್ರ ಆಟೋಮೆಟಿಕ್ ನಂಬರ್ ಬರುತ್ತದೆ. ಆದರೆ, ಹಳೆಯ ಬಂಕ್​ಗಳಲ್ಲಿ 'ತ್ರಿ' ಡಿಜಿಟ್ ನಮೂದಾಗುತ್ತಿಲ್ಲ. ಅದನ್ನು ಮೂರಂಕಿ ಮಾಡಲು ಹೊರಟರೇ ಝಿರೋ ಆಗುತ್ತಿದೆ. ಇದರಿಂದಾಗಿ ಒಂದೊಮ್ಮೆ ತೈಲ ಬೆಲೆ 100ರ ಗಡಿ ದಾಟಿದ್ರೆ, ದೇಶದ 40ರಷ್ಟು ಹಳೆಯ ಬಂಕ್​ ಮಾಲೀಕರಿಗೆ ಸಮಸ್ಯೆ ಎದುರಾಗಲಿದೆ.

ಧಾರವಾಡ ಜಿಲ್ಲೆಯಲ್ಲೂ 40ರಷ್ಟು ಬಂಕ್​ಗಳು ಮೂರಂಕಿ ಸಂಖ್ಯೆ ಸಮಸ್ಯೆ ಎದುರಿಸುತ್ತಿವೆ. ಸರ್ಕಾರ ಹಾಗೂ ಐಓಸಿಎಲ್ ಎಲ್ಲ ಬಂಕ್​​ಗಳಲ್ಲಿಯೂ ಹೊಸ ಸಾಫ್ಟ್​ವೇರ್ ಅಳವಡಿಸದೇ ಹೋದರೆ, ತಾಂತ್ರಿಕ ಸಮಸ್ಯೆಯಿಂದ ಹಳೆಯ ಬಂಕ್​ಗಳು ಬಂದ್ ಆಗುವ ಸಾಧ್ಯತೆ ಇದೆ.

ಸದ್ಯ ಧಾರವಾಡ ಜಿಲ್ಲಾ ಪೆಟ್ರೋಲ್ ಬಂಕ್​ಗಳ ಮಾಲೀಕರ ಸಂಘದ ವಾಟ್ಸ್​ಆ್ಯಪ್​ ಗ್ರೂಫ್​ನಲ್ಲಿ ಈ ಬಗ್ಗೆ ಮಾಹಿತಿ ಕೇಳಲಾಗುತ್ತಿದೆ. ಡಿಯು ಹಾಗೂ ಆಟೋ ಮಷಿನ್ ಇಲ್ಲದವರು ಮಾಹಿತಿ ನೀಡಲು ಐಓಸಿಎಲ್​​ಗೆ ಕಳುಹಿಸಿ ಎಂದು ಹೇಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.