ETV Bharat / city

ತವರು ಮನೆಯಿಂದ ಪತ್ನಿಯನ್ನು ಕಳಿಸದಿದ್ದಕ್ಕೆ ಅತ್ತೆಯ ಮೇಲೆ ಬ್ಲೇಡ್​​ನಿಂದ ಹಲ್ಲೆ ಮಾಡಿದ ಅಳಿಯ - ಹುಬ್ಬಳ್ಳಿಯಲ್ಲಿ ಅತ್ತೆ ಮೇಲೆ ಹಲ್ಲೆ ಮಾಡಿದ ಅಳಿಯ

ಈ ವೇಳೆ ಜಗಳ ಬಿಡಿಸಲು ಮುಂದಾಗಿದ್ದ ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಮೇಶ, ಬ್ಲೇಡ್‌ನಿಂದ ಹಲ್ಲೆ ಮಾಡಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಈ ಸಂಬಂಧ ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

blade attack on mother in law in Hubballi
ತವರು ಮನೆಯಿಂದ ಪತ್ನಿಯನ್ನು ಕಳಿಸದಿದ್ದಕ್ಕೆ ಅತ್ತೆಯ ಮೇಲೆ ಬ್ಲೇಡ್​​ನಿಂದ ಹಲ್ಲೆ ಮಾಡಿದ ಅಳಿಯ
author img

By

Published : Dec 10, 2021, 1:58 PM IST

ಹುಬ್ಬಳ್ಳಿ : ನಾಲ್ಕು ವರ್ಷಗಳಿಂದ ತವರು ಮನೆ ಸೇರಿರುವ ಹೆಂಡತಿಯನ್ನು ವಾಪಸ್ ಕಳುಹಿಸಲಿಲ್ಲ ಎಂಬ ಆಕ್ರೋಶದಿಂದ ಅಳಿಯನೊಬ್ಬ ಅತ್ತೆಯ ಮೇಲೆ ಬ್ಲೇಡ್​ನಿಂದ ಹಲ್ಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ನವನಗರದ ನಿವಾಸಿ ಸೋಮವ್ವ ಮಲ್ಲಾಡ ಹಲ್ಲೆಗೀಡಾದವರು. ಪಡದಯ್ಯನ ಹಕ್ಕಲದ ರಮೇಶ ದೊಡ್ಡಮನಿ ಎಂಬಾತನೇ ಅತ್ತೆ ಮೇಲೆ ಹಲ್ಲೆ ನಡೆಸಿದ ಆರೋಪಿ.

ನಾಲೈದು ವರ್ಷಗಳ ಹಿಂದೆ ಪತಿ ರಮೇಶನೊಂದಿಗೆ ಜಗಳವಾಡಿ ಪತ್ನಿ ತವರು ಸೇರಿದ್ದರು. ಡಿಸೆಂಬರ್ 7ರಂದು ಪತ್ನಿ ಜೊತೆ ರಮೇಶ ಜಗಳ ತೆಗೆದು ಹಲ್ಲೆ ನಡೆಸಿದ್ದನು.

ಈ ವೇಳೆ ಜಗಳ ಬಿಡಿಸಲು ಮುಂದಾಗಿದ್ದ ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ರಮೇಶ, ಬ್ಲೇಡ್‌ನಿಂದ ಹಲ್ಲೆ ಮಾಡಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಈ ಸಂಬಂಧ ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗೆಳತಿ ಫೋನ್​ ರಿಸೀವ್​ ಮಾಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.