ಹುಬ್ಬಳ್ಳಿ: ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಾಯಕರು ಎಡವಿದ್ದಾರೆ. ಹ್ಯಾಟ್ರಿಕ್ ಗೆಲುವಿಗಾಗಿ ಮಾಡಿದ್ದ ಬಿಜೆಪಿ ಪ್ಲಾನ್ ಉಲ್ಟಾ ಆಗಿದೆ.
ಹೌದು, ವಾರ್ಡ್ ವಿಂಗಡಣೆ ಮಾಡಿದ್ರು ಸಹ ಜನ ಬಿಜೆಪಿಗೆ ಬಹುಮತ ನೀಡಿಲ್ಲ. ತಮಗೆ ಬೇಕಾದ ಹಾಗೆ ವಾರ್ಡ್ ವಿಂಗಡಣೆ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು. ಆರೋಪಕ್ಕೆ ಕ್ಯಾರೇ ಎನ್ನದೆ ಬಿಜೆಪಿ ಚುನಾವಣೆ ಎದುರಿಸಿತ್ತು.
ದೊಡ್ಡ ದೊಡ್ಡ ನಾಯಕರಿದ್ದರೂ ಮ್ಯಾಜಿಕ್ ನಂಬರ್ 42 ತಲುಪುವಲ್ಲಿ ಬಿಜೆಪಿ ವಿಫಲವಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಬ್ಬರೇ ಒಬ್ಬ ಶಾಸಕ ಇದ್ದರೂ ಸಹ 10 ಹೆಚ್ಚುವರಿ ವಾರ್ಡ್ಗಳನ್ನ ಗೆಲ್ಲಲು ಕಾಂಗ್ರೆಸ್ಗೆ ಸಾಧ್ಯವಾಗಿದೆ. ಆದ್ರೆ ಬಿಜೆಪಿಯ ಪ್ರತಿಷ್ಠೆಯ ಕಣವಾಗಿದ್ದ ಹುಬ್ಬಳ್ಳಿ -ಧಾರವಾಡದಲ್ಲಿ ಪಾಲಿಕೆ ಚುನಾವಣೆ ಅತಂತ್ರವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹುಟ್ಟೂರಾದ್ರೂ ಬಿಜೆಪಿ ಮ್ಯಾಜಿಕ್ ನಂಬರ್ ತಲುಪಿಲ್ಲ.
ಇದನ್ನೂ ಓದಿ: ಹು-ಧಾ ಪಾಲಿಕೆ ಮೇಯರ್ ಪಟ್ಟಕ್ಕೆ ತೀವ್ರಗೊಂಡ ಪೈಪೋಟಿ: ಯಾರಿಗೆ ಒಲಿಯಲಿದೆ ಸ್ಥಾನ!
ಬಿಜೆಪಿ ನಾಯಕರ ಸಮನ್ವಯ ಕೊರತೆ. ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಹಾಗೂ ಜಗದೀಶ್ ಶೆಟ್ಟರ್ ನಡುವಿನ ಶೀತಲ ಸಮರ ಹೆಚ್ಚು ಸ್ಥಾನಗಳನ್ನ ಗೆಲ್ಲಲು ಕೇಸರಿ ಪಡೆ ಹೆಣಗಾಡುವಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಜೆಪಿ 3 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ 39 ಸೀಟ್ಗಳನ್ನ ಗೆಲ್ಲುವಲ್ಲಿ ಸಫಲವಾಗಿದೆ. ಮತ್ತೆ ಓರ್ವ ಪಕ್ಷೇತರ ಅಭ್ಯರ್ಥಿ ಮೇಲೆ ಕಮಲ ಡಿಪೆಂಡ್ ಆಗುವಂತಾಗಿದ್ದು, ನಾಯಕರ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ಇದು ಮೇಯರ್ ಹಾಗೂ ಉಪಮೇಯರ್ ಆಯ್ಕೆ ಮೇಲೂ ಮತ್ತೆ ವ್ಯತಿರಿಕ್ತ ಪಡಿಣಾಮ ಬೀಳುವ ಸಾಧ್ಯತೆ ಹೆಚ್ಚಾಗಿದೆ.