ETV Bharat / city

'ಶಿವಳ್ಳಿ ಪಕ್ಷ, ಅಧಿಕಾರ ಮೀರಿದ ವ್ಯಕ್ತಿ'.. ಸಚಿವರ ನಿಧನಕ್ಕೆ ಬಿಜೆಪಿ ನಾಯಕರ ಕಂಬನಿ

ಸಚಿವ ಶಿವಳ್ಳಿ ಅವರ ಅಂತಿಮ ದರ್ಶನ ಪಡೆದ ಬಿಜೆಪಿ ನಾಯಕರು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ

ಸಚಿವ ಶಿವಳ್ಳಿ ನಿದನಕ್ಕೆ ಬಿಜೆಪಿ ನಾಯಕರ ಸಂತಾಪ
author img

By

Published : Mar 22, 2019, 9:39 PM IST

ಹುಬ್ಬಳ್ಳಿ: ಸಚಿವ ಸಿ.ಎಸ್​. ಶಿವಳ್ಳಿ ಅವರ ಅಕಾಲಿಕ ನಿಧನಕ್ಕೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ. ಅಜಾತಶತ್ರುವಾಗಿದ್ದ ಶಿವಳ್ಳಿ ಅವರ ಅಗಲಿಕೆಗೆ ಬಿಜೆಪಿ ನಾಯಕರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.

ಶಿವಳ್ಳಿ ಜತೆಗಿನ ಒಡನಾಟ ನೆನೆದ ಬಿಜೆಪಿ ಸಂಸದ ಪ್ರಹ್ಲಾದ್​ ಜೋಶಿ, ನಾನು ಶಿವಳ್ಳಿ ಕ್ಲಾಸ್ಮೇಟ್. ನಮ್ಮದು ಅಧಿಕಾರ ಮೀರಿದ ಸ್ನೇಹ. ಅವರೊಬ್ಬ ಸಾಮಾನ್ಯ ವ್ಯಕ್ತಿಯಾಗಿ, ಕಲಾಪ್ರೇಮಿಯಾಗಿ ತಮ್ಮನ್ನು ಗುರುತಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ನನ್ನ ಹಾಗೂ ಶಿವಳ್ಳಿ ಅವರ ಪಕ್ಷ ಬೇರೆ ಬೇರೆಯಾಗಿದ್ದರೂ ಅದೆಲ್ಲವನ್ನೂ ಮೀರಿದ ಸ್ನೇಹ ನಮ್ಮದಾಗಿತ್ತು. ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆ. ಸ್ನೇಹಿತನ ಪಾರ್ಥಿವ ಶರೀರದ ದರ್ಶನಕ್ಕೆ ಬಂದಿರುವುದು ನಮ್ಮ ದೌರ್ಭಾಗ್ಯ ಎಂದು ಭಾವುಕರಾದರು.

ಸಚಿವ ಶಿವಳ್ಳಿ ನಿದನಕ್ಕೆ ಬಿಜೆಪಿ ನಾಯಕರ ಸಂತಾಪ

ಮನಸ್ಸಿಗೆ ಮತ್ತೊಂದು ಆಘಾತ :

ಧಾರವಾಡದಲ್ಲಿ ಕಟ್ಟಡ ದುರಂತದ ನೋವು ಹಸಿಯಿರುವಾಗಲೇ, ಮತ್ತೊಂದು ನೋವು ಮನಸ್ಸಿಗೆ ಆಘಾತವನ್ನುಂಟು ಮಾಡಿದೆ. ಸರಳ, ಸಜ್ಜನಿಕೆ ವ್ಯಕ್ತಿ ಶಿವಳ್ಳಿಯವರ ಸಾವು ನಮಗೆಲ್ಲ ತುಂಬಾ ನೋವುಂಟು ಮಾಡಿದೆ. ಶಾಸಕರಾಗಿದ್ದ ಅವರಲ್ಲಿದ್ದ ಸರಳ ವ್ಯಕ್ತಿತ್ವ ಮಂತ್ರಿ ಆದಾಗ ಕೂಡ ಇತ್ತು. ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಅವರ ವ್ಯಕ್ತಿತ್ವದ ಕೈಗನ್ನಡಿಯಾಗಿದೆ ಎಂದು ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ನಿಧನರಾದ ಸಂದರ್ಭದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದಿಂದ ಆಗಮಿಸಿದ ಏಕೈಕ ನಾಯಕ ಶಿವಳ್ಳಿಯವರು. ಅಂದು ವಾಜಪೇಯಿಯವರ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು ಎಂದು ನೆನಪಿಸಿಕೊಂಡರು.

ಬಡವರಿಗೆ ಸಹಾಯ :

ರಾಜಕೀಯವಾಗಿ ತಾವು ನಂಬಿದ ತತ್ವ ಹಾಗೂ ಸಿದ್ದಾಂತಕ್ಕೆ ಶಿವಳ್ಳಿ ಬದ್ಧವಾಗಿದ್ದರು. ಯಾವಾಗಲೂ ರಾಜಿ ‌ಮಾಡಿಕೊಳ್ಳುತ್ತಿರಲಿಲ್ಲ. ಯಾರೇ ಬಡವರು ಕರೆ ಮಾಡಿದರೂ ಅವರಿಗೆ ಸ್ಪಂದಿಸುತ್ತಿದ್ದರು. ಅವರು ನಿಧನರಾದ ಕೊನೆ ಗಳಿಗೆಯಲ್ಲಿ ಮನೆಗೆ ಬಂದ ಬಡವರಿಗೆ ಮದುವೆ ಖರ್ಚಿಗಾಗಿ 30 ಸಾವಿರ ನೀಡಿ ಉದಾರತೆ ಮೆರೆದಿದ್ದರು. ಶಿವಳ್ಳಿ ಅವರ ಆ ಗುಣ, ತತ್ವ, ಆದರ್ಶಗಳು ಎಲ್ಲರಿಗೂ ಮಾದರಿ ಎಂದು ಮಾಜಿ ಡಿ‌ಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಸೌಜನ್ಯತೆಯ ಸಾಕಾರ ಮೂರ್ತಿ :

ಸರಳ, ಸೃಜನಶೀಲ ವ್ಯಕ್ತಿತ್ವದ ಸಚಿವ ಸಿ.ಎಸ್.ಶಿವಳ್ಳಿಯವರು ನಮ್ಮನ್ನು ಅಗಲಿರುವುದು ನಮಗೆಲ್ಲ ಅತೀವ ದುಃಖವಾಗಿದೆ. ಪಕ್ಷಗಳು ಬೇರೆ ಬೇರೆಯಾದರೂ ನಾವು ಅವರೊಂದಿಗೆ ಸದಾ ಸೌಜನ್ಯತೆಯಿಂದ ಇದ್ದೆವು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಸಿ.ಎಸ್. ಶಿವಳ್ಳಿಯವರು ಸೃಜನಶೀಲ ವ್ಯಕ್ತಿತ್ವದಿಂದ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಾಗಿದ್ದರು. ಮುತ್ಸದ್ದಿ ರಾಜಕಾರಣಿಯಾಗಿ ರಾಜಕೀಯ ರಂಗದಲ್ಲಿ ಮಾತ್ರವಲ್ಲದೇ ಧಾರ್ಮಿಕತೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಉತ್ತಮ ನಾಯಕತ್ವ, ಸಂಘಟನಾ ಕೌಶಲ್ಯದಿಂದ ಅತ್ಯುತ್ತಮ ಜನನಾಯಕರಾಗಿದ್ದರು ಎಂದು ಹೇಳಿದರು.

Intro:Body:

1 shivalli joshi (1).mp4   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.