ಹುಬ್ಬಳ್ಳಿ : ವಿಧಾನ ಪರಿಷತ್ನಲ್ಲಿ ನಿನ್ನೆ (ಶುಕ್ರವಾರ) ವಿಪಕ್ಷ ಸದಸ್ಯರ ವರ್ತನೆ ಬಹಳ ನೋವು ತಂದಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ಸದಸ್ಯರು ನನ್ನ ತೇಜೋವಧೆ ಮಾಡುವ ನಿಟ್ಟಿನಲ್ಲಿ ಮಾತನಾಡಿದ್ದಾರೆ. ನನಗೆ ಬಹಳ ನೋವಾಗಿದೆ.
ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಈ ತರಹದ ಮಾತುಗಳನ್ನು ಕೇಳಿರಲಿಲ್ಲ. ನನ್ನನ್ನು ಏಜೆಂಟ್ ಎಂದು ಕರೆದಿದ್ದಾರೆ. ಅದು ತುಂಬಾ ಬೇಸರ ತರಿಸಿದೆ. ನಂತರ ಕ್ಷಮೆ ಕೇಳಿದ್ದಾರೆ. ಹೀಗಾಗಿ, ಆ ಪ್ರಕರಣ ಇತ್ಯರ್ಥವಾಗಿದೆ ಎಂದರು.
ಇನ್ನು ಫೆಬ್ರವರಿಯಲ್ಲಿ ಜಂಟಿ ಸದನ ಕರೆಯುತ್ತೇವೆ. ಒಂದು ವಾರದ ನಂತರ ಬಜೆಟ್ ಅಧಿವೇಶನ ನಡೆಯುತ್ತದೆ ಎಂದು ಹೊರಟ್ಟಿ ತಿಳಿಸಿದರು.
ಇದನ್ನೂ ಓದಿ: ಸಿಎಂ ಬದಲಾವಣೆ ಇಲ್ಲ, ಊಹಾಪೋಹಗಳಿಗೆ ಕಿವಿಗೊಡಬಾರದು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ