ಹುಬ್ಬಳ್ಳಿ : ನಿನ್ನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ಟಿಪ್ಪರ್‌ಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವಿಗೀಡಾಗಲು ಸಂಚಾರಿ ಪೊಲೀಸರೇ ಕಾರಣ ಎಂದು ಪೊಲೀಸ್ ಮೇಲೆ ಹಲ್ಲೆ ನಡೆಸಲಾಗಿತ್ತು. ಪೊಲೀಸರ ಮೇಲೆ ಹಲ್ಲೆ ನಡೆಸಿರುವುದನ್ನು ಹುಬ್ಬಳ್ಳಿ ಜನತೆ ಖಂಡಿಸಿದ್ದಾರೆ.
ಸರ್ಕಾರದ ಆದೇಶದ ಮೇರೆಗೆ ಟ್ರಾಫಿಕ್ ಪೊಲೀಸರು ಬಿಸಿಲು, ಮಳೆ ಎನ್ನದೇ ತಮ್ಮ ಕರ್ತವ್ಯ ಮಾಡುತ್ತಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರು ಬೈಕ್ ಚಲಾಯಿಸುವಾಗ ಯಾವುದೇ ಕಾನೂನು ಪಾಲನೆ ಮಾಡದಿರುವುದು ನೋಡಿದ್ದೇವೆ. ಇದರಿಂದಾಗಿ ಪೊಲೀಸರ ಕಣ್ತಪ್ಪಿಸಿ ಹೋಗುವಾಗ ಇಂತಹ ಘಟನೆಗಳು ಹಲವಾರು ಬಾರಿ ಆಗಿವೆ ಎಂದು ಜನ ಹೇಳುತ್ತಿದ್ದಾರೆ.
ಇದಕ್ಕೆ ಪೂರಕವಾಗಿ ನಿನ್ನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆ ಅಪಘಾತದಲ್ಲಿ ಯುವಕ ಸಾವಿನಪ್ಪಿದ್ದು, ಇದಕ್ಕೆ ಪೊಲೀಸರೇ ಕಾರಣವೆಂದು ಸಾರ್ವಜನಿಕರು ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.