ETV Bharat / city

ಹುಬ್ಬಳ್ಳಿ: ಗಾರ್ಡನ್​ನಲ್ಲಿರೋ ಕರಕಿ ತುಳಿಯಬೇಡಿ ಎಂದಿದ್ದೇ ತಪ್ಪಾಯ್ತು.. ಅರ್ಚಕರ ಮೇಲೆ ನಡೀತು ಹಲ್ಲೆ!?

author img

By

Published : Nov 17, 2021, 2:13 PM IST

ಹುಬ್ಬಳ್ಳಿ ನಗರದ ಗೋಕುಲ್ ರಸ್ತೆಯಲ್ಲಿರುವ ಗ್ರೀನ್​ ಗಾರ್ಡನ್ ಕಾಲೋನಿಯ ಶ್ರೀ ಕರಿಯಮ್ಮ ದೇವಸ್ಥಾನದ (Shree Kariyamma Temple) ಅರ್ಚಕರೊಬ್ಬರು ಗಾರ್ಡನ್​ನಲ್ಲಿರುವ ಕರಕಿಯನ್ನು ತುಳಿಯಬೇಡಿ, ದೇವರಿಗೆ ಬಳಸುತ್ತೇವೆ ಎಂದು ಹೇಳಿದ್ದಕ್ಕೆ ಜಡಿ ಕುಟುಂಬಸ್ಥರು ಪೂಜಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Assault on shree kariyamma temple priest
ಅರ್ಚಕರ ಜೊತೆ ಜಡಿ ಕುಟುಂಬಸ್ಥರು ಜಗಳ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಅರ್ಚಕರ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ. ನಗರದ ಗೋಕುಲ್ ರಸ್ತೆಯಲ್ಲಿರುವ ಗ್ರೀನ್​ ಗಾರ್ಡನ್ ಕಾಲೋನಿಯ ಶ್ರೀ ಕರಿಯಮ್ಮ ದೇವಸ್ಥಾನದ (Shree Kariyamma Temple) ಅರ್ಚಕರಾದ ಮಂಜುನಾಥ ಹೆಬ್ಬಾರ ಮೇಲೆ ಹಲ್ಲೆ ಮಾಡಲಾಗಿದೆ.

ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂದೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ದೇವಸ್ಥಾನದ ಅರ್ಚಕರು, ಗಾರ್ಡನ್​ನಲ್ಲಿರುವ ಕರಕಿ ತುಳಿಯಬೇಡಿ, ದೇವರಿಗೆ ಬಳಸುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಜಡಿ ಕುಟುಂಬಸ್ಥರು ಅರ್ಚಕರ ಜೊತೆ ಜಗಳವಾಡಿದ್ದಾರೆ.

ಇನ್ನು ಮಾರನೇ ದಿನ (ನ. 2 ರಂದು) ದೇವಸ್ಥಾನಕ್ಕೆ ಬಂದ ಜಡಿ ಕುಟುಂಬಸ್ಥರು ನಿನ್ನೆ ನಡೆದ ವಿಷಯವನ್ನೇ ಮನಸ್ಸಿನಲ್ಲಿಟ್ಟುಕೊಂಡು ಮತ್ತೆ ಅರ್ಚಕರ ಜೊತೆ ಜಗಳ ತೆಗೆದು, ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಪ್ರದೀಪ‌ ಜಡಿ ಎಂಬವರು ದೇವಸ್ಥಾನದ ಪೂಜಾರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಳ್ಳಾರಿ: ಹುಚ್ಚನ ಅಂತ್ಯ ಸಂಸ್ಕಾರದಲ್ಲಿ ಸಾವಿರಾರು ಜನರು ಭಾಗಿ, ಫೋಟೋ, ವಿಡಿಯೋ ವೈರಲ್​

ಈ ಕುರಿತಂತೆ ಅರ್ಚಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಸ್ಥಳೀಯ ಕಾರ್ಪೊರೇಟರ್​ ಸರಸ್ವತಿ ದೂಂಗಡಿ ಅವರ ಪತಿ ವಿನಾಯಕ ದೂಂಗಡಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ಮಾಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಶಕ್ತಿಧಾಮದ ಮಕ್ಕಳ ನೋಡಿಕೊಳ್ಳಲು ಅಶ್ವಿನಿ ಮೇಡಂ ಬಳಿ ಅನುಮತಿ ಕೇಳಿದ್ದೇನೆ: ನಟ ವಿಶಾಲ್

ಈ ಘಟನೆ ನಂತರ ಅರ್ಚಕರು ದೇವಸ್ಥಾನಕ್ಕೆ ಬರುತ್ತಿಲ್ಲ. ಸ್ಥಳೀಯ ಭಕ್ತರು ಅರ್ಚಕರ ಬಳಿ ತೆರಳಿ, ಮರಳಿ ದೇವಸ್ಥಾನಕ್ಕೆ ಬನ್ನಿ ಎಂದು ಮನವಿ ಮಾಡಿದ್ರೂ ದೇವಾಲಯದ ಪೂಜಾ ಕಾರ್ಯಗಳಲ್ಲಿ ಮಂಜುನಾಥ ತೊಡಗದಿರುವುದರಿಂದ ಸ್ಥಳೀಯರು ಬೇಸರ ವ್ಯಕ್ತಪಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.